20.4 C
Bangalore
Monday, December 9, 2019

‘ಶಿರಗುಪ್ಪಿ’ ಸೌರ ಗ್ರಾಮ

Latest News

ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ಕಾಗವಾಡ, ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ

ಬೆಳಗಾವಿ: ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೊದಲ ಸುತ್ತಿನ ಎಣಿಕೆಯಲ್ಲಿ ಮುಂದಿದ್ದಾರೆ. ಅಂಚೆಮತಗಳ ಎಣಿಕೆಯಲ್ಲೂ ಮುಂದಿದ್ದ ಅವರು ನಂತರ ಮೊದಲ ಸುತ್ತಿನಲ್ಲೂ...

ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರತಿ ಮನೆಯಲ್ಲೂ ಈಗ ಸೋಲಾರ ದೀಪಗಳು ಝುಗಮಗಿಸುತ್ತಿವೆ. 1,253 ಮನೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಾಗಿದ್ದು, ‘ಶಿರಗುಪ್ಪಿ’ಯು ರಾಜ್ಯದ ಮೊದಲ ಸೌರ ಗ್ರಾಮವಾಗಿ ಹೊರ ಹೊಮ್ಮಿದೆ.

ಪ್ರತಿ ಮನೆಯಲ್ಲಿ 15 ಆಂಪ್ಸ್ ಹಾಗೂ 5 ಆಂಪ್ಸ್ ಸಾಮರ್ಥ್ಯದ ತಲಾ ಟ್ಯೂಬ್​ಲೈಟ್ ಅಳವಡಿಸಲಾಗಿದೆ. ಸೋಲಾರ್ ಸಹಾಯದಿಂದ ಇವು ಬೆಳಗುತ್ತಿವೆ. ಗ್ರಾಮದ 22 ದೇವಸ್ಥಾನಗಳಲ್ಲಿ ಸೋಲಾರ್ ಅಳವಡಿಸಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ 5, ದರ್ಗಾದಲ್ಲಿ 2, ಜೈನ್ ಬಸದಿಯಲ್ಲಿ 1 ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಪ್ರಮುಖ ವೃತ್ತದಲ್ಲಿ 5 ಹೈ ಮಾಸ್ಟ್ ಬಲ್ಬ್ ಅಳವಡಿಸಲಾಗಿದೆ.

ಸೆಲ್ಕೋ ಸೋಲಾರ ಲೈಟ್ ಪ್ರೖೆ. ಲಿಮಿಟೆಡ್ ಸಂಸ್ಥೆ ಈ ಗ್ರಾಮವನ್ನು ಸೌರಶಕ್ತಿಯ ಮೂಲಕ ಬೆಳಗುವಂತೆ ಮಾಡಿದೆ.  ಮನೆಗಳಲ್ಲಿ ಸೋಲಾರನಿಂದ 2 ಟ್ಯೂಬ್ ಲೈಟ್​ಗಳು ಬೆಳಗುತ್ತಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಕಾರಿ ಪತ್ತಿನ ಸಂಘ, ನ್ಯಾಯಬೆಲೆ ಅಂಗಡಿ, ಹಾಲು ಉತ್ಪಾದಕರ ಸಹಕಾರಿ ಸಂಘ, ಗ್ರಾ.ಪಂ. ಕಚೇರಿ, ನಾಡಕಚೇರಿ, ರೈತ ಸಂಪರ್ಕ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಸೋಲಾರ್ ಬಳಕೆ ಮಾಡಲಾಗುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ತರಬೇತಿ ಸೌರ ವಿದ್ಯುತ್ ಸಹಾಯದಿಂದ ನಡೆದಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೇರಿ ಇತರೆ ಕೆಲಸಗಳಿಗೆ ಸೋಲಾರ್ ಶಕ್ತಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದೆ ಎನ್ನುವುದೇ ಗೊತ್ತಾಗುವುದಿಲ್ಲ. ಈ ಯೋಜನೆಯಿಂದ ಇಡೀ ಗ್ರಾಮ ವಿದ್ಯುತ್ ಸ್ವಾವಲಂಬಿಯಾಗಿದೆ. ಗ್ರಾಮದ ಬಹುತೇಕ ಮನೆಗಳ ವಿದ್ಯುಲ್ ಶುಲ್ಕ ಪ್ರತಿ ತಿಂಗಳು 500 ರೂ. ಗಡಿ ದಾಟುತ್ತಿತ್ತು. ಸೋಲಾರ ಅಳವಡಿಸಿದ ಬಳಿಕ ಹೆಸ್ಕಾಂಗೆ ಕಟ್ಟುವ ಶೇ. 50ರಷ್ಟು ಹಣ ಗ್ರಾಮಸ್ಥರಿಗೆ ಉಳಿತಾಯವಾಗುತ್ತಿದೆ. ಪ್ರತಿ ಮನೆಯಲ್ಲಿ ಒಂದು ಮೊಬೈಲ್ ಚಾರ್ಜರ್ ಪಾಯಿಂಟ್ ಅಳವಡಿಸಾಗಿದೆ. ಪ್ರಸ್ತುತ ಸೀಮೆ ಎಣ್ಣೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಇಂತಹದರಲ್ಲಿ ಸೋಲಾರ ಯೋಜನೆ ಜಾರಿ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ನವಪ್ರವರ್ತನಾ ನಿಧಿ

ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿವೇಚನೆಯಿಂದ ಗ್ರಾಮದಲ್ಲಿ ಸೋಲಾರ್ ಯೋಜನೆ ಜಾರಿಯಾಗಿದೆ. ಸರ್ಕಾರದಿಂದ ಜಿ.ಪಂ.ಗೆ ಬಂದ ನವಪ್ರವರ್ತನಾ ನಿಧಿಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಮನೆಗಳ ಮೇಲೆ ಸೆಲ್ಕೋ ಕಂಪನಿಯ ಸೊಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಪ್ರತಿವರ್ಷ ಎಲ್ಲ ಜಿ.ಪಂ.ಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬರುತ್ತದೆ. ಆದರೆ ಚೈತ್ರಾ ಶಿರೂರ ಅವರು ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಭಳಕೆಗೆ ಮಾಡಿಕೊಳ್ಳುವ ಈ ಯೋಜನೆಗೆ ಬಳಸಿದ್ದು ಮಾದರಿಯಾಗಿದೆ.

11 ಲಕ್ಷ ಕರ ವಸೂಲಿ

ಸೋಲಾರ್ ಯೋಜನೆ ಗ್ರಾಮಕ್ಕೆ ಬೆಳಕಷ್ಟೇ ನೀಡಿಲ್ಲ. ಗ್ರಾ.ಪಂ.ಗೆ 11 ಲಕ್ಷ ರೂ. ಕರ ವಸೂಲಿ ಮಾಡಿ ಕೊಟ್ಟಿದೆ. ಕರ ಬಾಕಿ ಉಳಿಸಿಕೊಂಡ ಗ್ರಾಮಸ್ಥರಿಗೆ ತೆರಿಗೆ ಕಟ್ಟಿದ ಬಳಿಕವೇ ಯೋಜನೆಯ ಲಾಭ ನೀಡುತ್ತೇವೆ ಎಂದು ಷರತ್ತು ವಿಧಿಸಿದ್ದರಿಂದ ಇಷ್ಟೊಂದು ಪ್ರಮಾಣದ ತೆರಿಗೆ ಸಂಗ್ರಹವಾಗಿದೆ.

ಟೆಂಡರ್ ಪಡೆದವರೇ 5 ವರ್ಷದವರೆಗೆ ಸೋಲಾರ್ ಯೋಜನೆ (ಪ್ಯಾನೆಲ್​ಗಳು) ನಿರ್ವಹಣೆ ಮಾಡುತ್ತಾರೆ. ಪ್ರತಿ ಮನೆಯಿಂದ ನಿರ್ವಹಣೆಗೆ 20 ರೂ. ಶುಲ್ಕ ಪಡೆಯಲಾಗುವುದು. 10-12 ದಿನಗಳಲ್ಲಿ ಸೋಲಾರ ಸೌಲಭ್ಯವನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು.
 ಚೈತ್ರಾ ಶಿರೂರ, ಜಿ.ಪಂ. ಅಧ್ಯಕ್ಷೆ, ಧಾರವಾಡ

ಸೋಲಾರ್ ಯೋಜನೆಗೆ ಜನರು ಮೆಚ್ಚಿದ್ದಾರೆ. ಬೇರೆ ಊರುಗಳಿಗೂ ಇದು ಮಾದರಿ.
 ಭುವನೇಶ್ವರಿ ಶಿವನಗೌಡರ, ಗ್ರಾ.ಪಂ. ಅಧ್ಯಕ್ಷೆ

ಸೋಲಾರ್ ಅಳವಡಿಸಿದಾಗಿನಿಂದ ಗ್ರಾಮದಲ್ಲಿ ವಿದ್ಯುತ್ ಕಡಿತವಾದರೂ ಗೊತ್ತಾಗುವುದಿಲ್ಲ. ಈ ಯೋಜನೆಯಿಂದಾಗಿ ಗ್ರಾಮಸ್ಥರು ಹೆಸ್ಕಾಂಗೆ ಕಟ್ಟುವ ವಿದ್ಯುತ್ ಶುಲ್ಕ ಶೇ. 50ರಷ್ಟು ತಗ್ಗಿದೆ. ಮಾದರಿ ಯೋಜನೆ ಇದಾಗಿದೆ.
ಗುರುಪಾದಪ್ಪ ಶಿರೂರ, ಗ್ರಾ.ಪಂ. ಸದಸ್ಯ

ಸೋಲಾರ್ ಯೋಜನೆಯಿಂದ ಮನೆಯ ವಿದ್ಯುತ್ ಶುಲ್ಕ ಕಡಿಮೆಯಾಗಿದೆ. ಪ್ರಮುಖ ವೃತ್ತದಲ್ಲಿ ಅಳವಡಿಸಿರುವ ಹೈ ಮಾಸ್ಟ್ ಬಲ್ಬ್​ಗಳು ಊರಿಗೆ ಹೆಚ್ಚು ಬೆಳಕು ನೀಡುತ್ತವೆ.
ಚಂದ್ರು ದೊಡ್ಡಲಿಂಗನಗೌಡರ, ಗ್ರಾಮಸ್ಥ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...