ಶಿಬಿರಗಳಿಂದ ಸಂತೋಷ, ಬಾಂಧವ್ಯ ವೃದ್ಧಿ

ಲಕ್ಷ್ಮೇಶ್ವರ: ಬೇಸಿಗೆ ಶಿಬಿರಗಳು ಮಕ್ಕಳನ್ನು ಸಂತೋಷದೊಂದಿಗೆ ಇತರೆ ಮಕ್ಕಳೊಂದಿಗೆ ಬೆರೆಯುವ ಮನೋಭಾವ ಬೆಳೆಸುತ್ತವೆ ಎಂದು ಬಿಇಒ ವಿ.ವಿ. ಸಾಲಿಮಠ ಹೇಳಿದರು.

ತಾಲೂಕಿನ ಅಡರಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6, 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಬುಧವಾರದಿಂದ ಐದು ವಾರ ಹಮ್ಮಿಕೊಂಡಿರುವ ಸ್ವಲ್ಪ ಓದು- ಸ್ವಲ್ಪ ಮೋಜು-ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಸಿಗೆ ರಜೆಯಲ್ಲಿ ಟಿವಿ ಮುಂದೆ ಕುಳಿತು ವೃಥಾ ಕಾಲಹರಣ ಮಾಡದಂತೆ ಮಕ್ಕಳನ್ನು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕು. ಅವರ ಮನೋವಿಕಾಸ, ಜ್ಞಾನ ವೃದ್ಧಿ, ಸೃಜನಶೀಲರನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

ತಾಲೂಕು ಬೇಸಿಗೆ ಸಂಭ್ರಮದ ನೋಡಲ್ ಅಧಿಕಾರಿ ಎಸ್.ಕೆ. ಹವಾಲ್ದಾರ ಮಾತನಾಡಿ, ಶಿಬಿರದಲ್ಲಿ ಕುಟುಂಬ ವ್ಯವಸ್ಥೆ, ಆಹಾರ, ನೀರು, ನೈರ್ಮಲ್ಯ, ವ್ಯಾಯಾಮ, ಪರಿಸರ ಕುರಿತಾದ ಮಾಹಿತಿ ಶಿಕ್ಷಣ ನೀಡಲಾಗುವುದು. ಪ್ರತಿ ವಾರದ ಕೊನೇ ದಿನ ಪಾಲಕರು ಪಾಲ್ಗೊಂಡು ತಮ್ಮ ಮಕ್ಕಳ ಕಲಿಕಾ ಮಟ್ಟ ಪರಿಶೀಲಿಸುವರು ಎಂದರು.

ಶಾಲೆ ಮುಖ್ಯ ಶಿಕ್ಷಕ ಎ.ಎಂ. ಮಠದ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹರ್ಲಾಪೂರ, ಬಿ.ಎಂ. ಯರಗುಪ್ಪಿ, ಎಂ.ಎನ್. ಭರಮಗೌಡರ, ಜಿ.ಎಚ್. ರಾಜೂರ, ಡಿ.ಎಂ. ದ್ಯಾಮಣ್ಣವರ, ಇತರರಿದ್ದರು.

Leave a Reply

Your email address will not be published. Required fields are marked *