ಶಿಥಿಲ ಕಟ್ಟಡ ತೆರವುಗೊಳಿಸಿ ಶೀಘ್ರ ಕಾಮಗಾರಿ

ರಿಪ್ಪನ್​ಪೇಟೆ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭೇಟಿ ನೀಡಿ ಶಿಥಿಲಗೊಂಡ ಶಾಲಾ ಕಟ್ಟಡ ಪರಿಶೀಲಿಸಿದರು.

ಶಾಲಾಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ಮನವಿ ಮೇರೆಗೆ ನಗರ ಗ್ರಾಮ ವಾಸ್ತವ್ಯದ ಮಾರ್ಗಮಧೆ್ಯೆ ಶಾಲೆಗೆ ಭೇಟಿ ನೀಡಿ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದರು. ಕಳೆದ ಒಂದೂವರೆ ವರ್ಷದ ಹಿಂದೆ 3 ಕೊಠಡಿ ನಿರ್ವಣಕ್ಕಾಗಿ ಸರ್ಕಾರದಿಂದ 17.40 ಲಕ್ಷ ರೂ. ಮಂಜೂರಾಗಿತ್ತು.

1916ನೇ ಸಾಲಿನಲ್ಲಿ ನಿರ್ವಣವಾದ ಶಿಥಿಲಗೊಂಡ 3 ಕೊಠಡಿಗಳನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭಿಸುವ ಹಂತಕ್ಕೆ ಬಂದಿತ್ತು. ಆಗ ಕಾಮಗಾರಿಗೆ ಅನುಮತಿ ಪಡೆದಿಲ್ಲವೆಂದು ಪಟ್ಟಣದ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಪ್ರತಿಭಟಿಸುವ ಮೂಲಕ ಕಾಮಗಾರಿಗೆ ತಡೆಯೊಡ್ಡಿದ್ದರು. ನಂತರ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಟ್ಟಡ ನಿರ್ವಣದ ಕಡೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಆಗ ಸ್ಥಳದಲ್ಲೆ ಇದ್ದ ಕೃಷ್ಣಪ್ಪ ಅವರನ್ನು ಪ್ರಶ್ನಿಸಿದ ಡಿಸಿ, ಏನ್ರಿ ನಿಮ್ಮ ತಕರಾರು?, ಕಾಮಗಾರಿಗೆ ತಡೆವೊಡಿದವರೂ ನೀವೇ, ಈಗ ಬೇಗ ಕಟ್ಟಡ ತೆರವುಗೊಳಿಸಿ ಎನ್ನುವರು ನೀವೇ ಎಂದರು.

ಆಗ ಮುಜಗರಗೊಂಡ ಕೃಷ್ಣಪ್ಪ, ಆಗ ಅನುಮತಿ ಇರಲಿಲ್ಲ, ಈಗ ಅನುಮತಿ ನೀಡಲಾಗಿದೆ. ಆದ್ದರಿಂದ ಕೂಡಲೆ ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ. ಮಂಜೂರಾತಿಯಂತೆ ಅದೇ ಸ್ಥಳದಲ್ಲಿಯೆ ನೂತನ ಕಟ್ಟಡ ನಿರ್ವಿುಸುವ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಸಂಬಂಧಪಟ್ಟ ಇಂಜಿನಿಯರ್​ಗೆ ಶಿಥಿಲಕಟ್ಟಡ ತೆರವುಗೊಳಿಸಿ, ಕಾಮಗಾರಿ ಪ್ರಾರಂಭಿಸಲು ಸೂಚಿಸುವುದಾಗಿ ತಿಳಿಸಿದರು. ಎಸ್​ಡಿಎಂಸಿ ಅಧ್ಯಕ್ಷೆ ಧನಲಕ್ಷ್ಮೀ, ಮುಖ್ಯಶಿಕ್ಷಕಿ ಲೋಲಾಕ್ಷಮ್ಮ, ಉಮೇಶಗೌಡ, ಗಣೇಶ, ಮಂಜಪ್ಪ ಇನ್ನಿತರರಿದ್ದರು.

Leave a Reply

Your email address will not be published. Required fields are marked *