More

  ಶಿಕ್ಷಕಿಯಾದ ಜಿಪಂ ಸಿಇಒ ಪನ್ವಾರ

  ಯಾದಗಿರಿ: ವಡಿಗೇರಾ ತುಮಕೂರು ಗ್ರಾಮದ ಸಕರ್ಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ಗರೀಮಾ ಪನ್ವಾರ ಮಕ್ಕಳಿಗೆ ಪಾಠ ಬೋಧನೆ ಮಾಡುವ ಮೂಲಕ ಗಮನ ಸೆಳೆದರು.

  ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದರೆ, ಆದರೆ, ಬಹುತೇಕ ವಿದ್ಯಾರ್ಥಿಗಳು ಉತ್ತರ ನೀಡಿಲ್ಲ. ಕಾರಣ ಕೇಳಿದರೆ ನಮಗೆ ಇಂಗ್ಲಿಷ್, ವಿಜ್ಞಾನ, ಗಣಿತ ಶಿಕ್ಷಕರು ಇಲ್ಲ ಎನ್ನುವ ಉತ್ತರ ಬಂದಿತು. ಶಿಕ್ಷಕರ ಕೊರತೆಯಿಂದ ಪಾಠಗಳು ಆಗಿಲ್ಲ. ಅತಿಥಿ ಶಿಕ್ಷಕರು ವಾರದಲ್ಲಿ ಎರಡ್ಮೂರು ಬಾರಿ ಬರುತ್ತಾರೆ. ಹೀಗಾಗಿ ಪಠ್ಯ ಬೋಧನೆ ಆಗುತ್ತಿಲ್ಲ ಎನ್ನುವ ಅಳಲನ್ನು ವಿದ್ಯಾರ್ಥಿಗಳು ತೊಡಿಕೊಂಡಿದ್ದಾರೆ.

  ಜಿಲ್ಲೆಯಲ್ಲಿ ಮೊದಲಿನಿಂದಲೂ ಶಿಕ್ಷಕರ ಕೊರತೆ ಕಾಡುತ್ತಿದೆ. ಜತೆಗೆ ಈಚೆಗೆ ನಡೆದ ವರ್ಗಾವಣೆಯಿಂದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಿದ್ದು, ಇರುವ ಶಿಕ್ಷಕರಿಗೂ ಕಾರ್ಯದೋತ್ತಡ ಹೆಚ್ಚಿದೆ. ಪ್ರೌಢಶಾಲೆಗೆ 1,548 ಹುದ್ದೆಗಳು ಮಂಜೂರಾಗಿವೆ. ಪ್ರಾಥಮಿಕ ಶಾಲೆಗೆ 5,625 ಹುದ್ದೆಗಳು ಮಂಜೂರಾಗಿವೆ. ಆದರೆ, ಅರ್ಧಕ್ಕರ್ಧ ಖಾಲಿ ಇವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts