More

  ಶಾಸಕ ರಹೀಮ್ ಖಾನ್ ಪ್ರಚಾರ

  ಬೀದರ್: ಬಿಜೆಪಿಯ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿರುವ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಕೈಗೆ ಆಡಳಿತದ ಚುಕ್ಕಾಣಿ ಕೊಡಲಿದ್ದಾರೆ ಎಂದು ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಹೀಮ್ ಖಾನ್ ಹೇಳಿದರು.
  ನಗರದ ವಿವಿಧೆಡೆ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅವರು, ಬಿಜೆಪಿ ಆಡಳಿತದಲ್ಲಿ ಶೇ.40 ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದೆ. ಅಭಿವೃದ್ಧಿ ಕುಂಠಿತಗೊಂಡಿದ್ದರಿಂದ ಜನ ಬದಲಾವಣೆ ಬಯಸಿದ್ದಾರೆ ಎಂದರು.
  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯ ಸಾಧನೆಗಳನ್ನು ಜನ ಈಗಲೂ ಮರೆತಿಲ್ಲ. ಅಂದಿನ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿ ಅನೇಕ ಯೋಜನೆಗಳನ್ನು ಸ್ಮರಿಸುತ್ತಿದ್ದಾರೆ. ಕಾಂಗ್ರೆಸ್ ಜನಪರ ಕಾಳಜಿಯನ್ನು ಕೊಂಡಾಡುತ್ತಿದ್ದಾರೆ. ಶಾಸಕನಾಗಿ ಬೀದರ್ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಲ್ಲದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ವಿವಿಧ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿದ್ದೇನೆ. ಜನ ಸೇವೆಗೆ ಇನ್ನೊಂದು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
  ನಾವದಗೇರಿ, ಜಬ್ಬಾರ್ ಕಾಲನಿ, ಉಸ್ಮಾನಗಂಜ್, ಬಟ್ಟೆ ಬಜಾರ್, ರಾಮಮಂದಿರ ಪ್ರದೇಶ, ಚಾಂಬೋಳ ಮೊದಲಾದ ಕಡೆ ಖಾನ್ ಪ್ರಚಾರ ನಡೆಸಿದರು.

  See also  ಕೈ ಬಿಟ್ಟು ಕೇಸರಿ ಪಡೆಗೆ ಜೈ ಎಂದು ದಲಿತ ಮುಖಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts