Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಶಾಸಕ ಪರಣ್ಣಗೆ ಬೆದರಿಸಿದ 13 ಆರೋಪಿಗಳ ಬಂಧನ

Wednesday, 13.06.2018, 3:02 AM       No Comments

ಕೊಪ್ಪಳ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣವನ್ನು ಮೂರೇ ದಿನದಲ್ಲಿ ಪೊಲೀಸರು ಬೇಧಿಸಿದ್ದು, ಒಟ್ಟು 13 ಜನರನ್ನು ಬಂಧಿಸಿದ್ದಾರೆ.

ಬಳ್ಳಾರಿಯ ಸಂಗನಕಲ್ಲಿನ ಐಸಾಕ್, ಕಾರಟಗಿಯ ಎರ್ರಿಸ್ವಾಮಿ ಬಿಲ್ಗಾರ್, ಗಂಗಾವತಿಯ ಮಹ್ಮದ್ ನಾತೀಕ್ ಆಲಂ, ಸಿದ್ದಾಪುರದ ಮಹ್ಮದ್ ಫಾರೂಕ್ ಪ್ರಮುಖ ಆರೋಪಿಗಳು. ಇವರೆಲ್ಲ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದು, ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವುದು ವಿಶೇಷ. ಪ್ರಕರಣ ಬೆನ್ನತ್ತಿದ ಪೊಲೀಸರು 72 ಗಂಟೆಗಳಲ್ಲಿ ನಾಲ್ವರು ಪ್ರಮುಖ ಆರೋಪಿಗಳು, ನಕಲಿ ನೋಟು ವಿತರಿಸುತ್ತಿದ್ದ ನಾಲ್ವರು ಹಾಗೂ ನಕಲಿ ಸಿಮ್ಾರ್ಡ್ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಬಳ್ಳಾರಿಯ ವಿಜಯಲಕ್ಷ್ಮೀ, ಈಕೆಯ ಪತಿ ರಾಘವೇಂದ್ರ, ಮಕ್ಕಳಾದ ನಿರಂಜನ್, ಆಕಾಶ್​ರಿಂದ ಖೋಟಾ ನೋಟು ಪಡೆದು ಐಸಾಕ್ ಮತ್ತು ಇತರ ಆರೋಪಿಗಳು ನಾಗರಾಜ ಮತ್ತು ಮಧು ಎಂಬುವರ ಮೂಲಕ ಶಾಸಕರಿಗೆ ಬೆದರಿಕೆ ಪತ್ರ ಕಳಿಸಿದ್ದರು. ಐಡಿಯಾ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಆನಂದ್ ಹಾಗೂ ಈತನ ಸಹಚರರಾದ ಹನುಮಂತ ಮತ್ತು ರಾಮಣ್ಣ ನಕಲಿ ಸಿಮ್ ನೀಡಿದ್ದಾರೆ. ಸದ್ಯ ಇವರೆಲ್ಲರನ್ನೂ ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಬಂಧಿತರೆಲ್ಲರೂ ಚುನಾವಣೆಯಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಹಣ ಪಡೆವ ದುರುದ್ದೇಶದಿಂದ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

| ಡಾ.ಅನೂಪ್ ಶೆಟ್ಟಿ ಕೊಪ್ಪಳ ಎಸ್ಪಿ

Leave a Reply

Your email address will not be published. Required fields are marked *

Back To Top