ಶಾಸಕ ಡಾ.ಶಿವರಾಜ ಪಾಟೀಲ್-ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರಿಂದ ಅನುದಾನ ದುರ್ಬಳಕೆ; ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪ

blank

ರಾಯಚೂರು: ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಜನಪ್ರತಿನಿಧಿ ನ್ಯಾಯಾಯಕ್ಕೆ ದೂರು ಸಲ್ಲಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಇಬ್ಬರು ಶಾಸಕರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳುತ್ತಿದ್ದು, ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಆರು ಸಾವಿರ ಕೋಟಿ ರೂ. ಅನುದಾನ ತಂದಿರುವುದಾಗಿ ಡಾ.ಶಿವರಾಜ ಪಾಟೀಲ್ ಹೇಳುತ್ತಿದ್ದಾರೆ. ಎಲ್ಲೂ ಕೂಡ ಯಾವ ಯೋಜನೆ ಮತ್ತು ಬಿಡುಗಡೆಯಾದ ಅನುದಾನ ಎಷ್ಟು ಎಂದು ನಾಮಫಲಕವೇ ಹಾಕಿಲ್ಲ. ಅನುದಾನದ ಲೆಕ್ಕ ಕೊಡಿ ಎಂದು ಆಂದೋಲನ ಆರಂಭಿಸಲಾಗುವುದು. ಸಾವಿರಾರು ಕೋಟಿ ರೂ. ಅನುದಾನ ತಂದಿರುವುದಾಗಿ ಕೆ.ಶಿವನಗೌಡ ನಾಯಕರೂ ಹೇಳುತ್ತಿದ್ದು, ಅದೆಲ್ಲ ಶಾಸಕ ಮತ್ತು ಹಿಂಬಾಲಕರ ಪಾಲಾಗಿದೆ. ಸೋಲಿನ ಭೀತಿಯಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ದೂರಿದರು.

ಪದಾಧಿಕಾರಿಗಳಾದ ಎನ್.ಶಿವಶಂಕರ, ಈ.ವಿನಯಕುಮಾರ, ನರಸಿಂಹ ನಾಯಕ, ಬಿ.ತಿಮ್ಮಾರೆಡ್ಡಿ, ಲಕ್ಷ್ಮಿಪತಿ ಗಾಣಧಾಳ, ಯುಸೂಫ್ ಖಾನ್, ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…