Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಶಾಸಕ ಅಪ್ಪಾಜಿಗೆ ಪ್ರತಿಷ್ಠೆ ಪ್ರಶ್ನೆ

Thursday, 17.11.2016, 5:53 AM       No Comments
  • ಭದ್ರಾವತಿ ನಗರಸಭೆ 31ನೇ ವಾರ್ಡಿಗೆ 20ರಂದು ಉಪಚುನಾವಣೆ
  • ಪಕ್ಷೇತರ ಅಭ್ಯರ್ಥಿಗೆ ಜೆಡಿಎಸ್ ಬಲ

smg-1-web

  • ಬಸವರಾಜ್

ಭದ್ರಾವತಿ: ಈಗಾಗಲೇ ಒಂದು ಉಪಚುನಾವಣೆಯಲ್ಲಿ 15ನೇ ವಾರ್ಡ್ ಕಳೆದುಕೊಂಡಿರುವ ಜೆಡಿಎಸ್ಗೆ ನ. 20ರಂದು ನಡೆಯಲಿರುವ 31ನೇ ವಾರ್ಡಿನ ಚುನಾವಣೆ ಅಗ್ನಿ ಪರೀಕ್ಷೆ.

ತಾಂತ್ರಿಕ (?) ಕಾರಣದಿಂದ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲ. ಹೀಗಾಗಿ ಶಾಸಕ ಅಪ್ಪಾಜಿ ಪಕ್ಷೇತರ ಅಭ್ಯರ್ಥಿ ರಾಮಶೆಟ್ಟಿ ಅವರನ್ನು ಬೆಂಬಲಿಸಿದ್ದು, ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ನಂತರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಉಪಚುನಾವಣೆಯ ಫಲಿತಾಂಶ ಏನೇ ಬಂದರೂ ನಗರಸಭೆಯಲ್ಲಿ ಜೆಡಿಎಸ್ನ ಅಧಿಕಾರ ಅಭಾದಿತ. ಆದರೆ ವಿಧಾನಸಭೆ ಚುನಾವಣೆ ಸಮೀಪ ಇರುವ ಸಮಯದಲ್ಲಿ ನಡೆಯುತ್ತಿರುವ ಈ ಉಪಚುನಾವಣೆ ಪ್ರತಿಷ್ಠೆಯಾಗಿರುವುದು ಸಹಜ. ಪಕ್ಷೇತರರಷ್ಟೇ ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಹಿಂದೆ ನಡೆದ 15ನೇ ವಾರ್ಡಿನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.

31ನೇ ವಾರ್ಡಿಗೆ (ಸಾಮಾನ್ಯ ಮೀಸಲು ) ನಡೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಆಯ್ಕೆಯಾಗಿದ್ದ ರಾಮಕೃಷ್ಣೆ ಗೌಡ ನಿಧನ ಹೊಂದಿದ ಕಾರಣ ಈಗ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ದಿನೇಶ್, ಕಾಂಗ್ರೆಸ್ನಿಂದ ಜೆ. ಶಿವಕುಮಾರ್, ಪಕ್ಷೇತರರಾಗಿ ರಾಮಶೆಟ್ಟಿ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿ ಒಕ್ಕಲಿಗ ಸಮುದಾಯದ ದಿನೇಶ್, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ನಗರಸಭೆಗೆ ಈ ಹಿಂದೆ ಸಮಾಜವಾದಿ ಪಕ್ಷ ಹಾಗು ಕೆಜೆಪಿಯಿಂದ ತಲಾ ಒಮ್ಮೆ ಸ್ಪರ್ಧೆ ಮಾಡಿದ್ದಾರೆ. ಆದರೆ ವಿಜಯಲಕ್ಷ್ಮಿ ಒಲಿದಿಲ್ಲ. ಇದೀಗ ಮೂರನೇ ಬಾರಿ ಬಿಜೆಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

15 ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಕದಿರೇಶ್ ಅವರು ತಮ್ಮ ಸೊಸೆ ರೇಣುಕ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡಿದ್ದರು. 31ನೇ ವಾರ್ಡಿನ ಉಪಚುನಾವಣೆಯಲ್ಲೂ ಅದೇ ಫಲಿತಾಂಶ ಪುನರಾವರ್ತನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಜೆ.ಶಿವಕುಮಾರ್ ಕೂಡ ಒಕ್ಕಲಿಗರು. ವೃತ್ತಿಯಿಂದ ಅಡುಗೆ ಕಂಟ್ರಾಕ್ಟರ್. ಇವರು ನಗರಸಭಾ ಸದಸ್ಯರಾಗಿದ್ದ ದಿ. ರಾಮಕೃಷ್ಣೇಗೌಡ ಅವರ ಸಹೋದರ. ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಶಿವಕುಮಾರ್ಗೆ ಟಿಕೆಟ್ ನೀಡಿದ್ದಾರೆ. ಸಹೋದರ ರಾಮಕೃಷ್ಣೇಗೌಡ ನಗರಸಭೆ ಸದಸ್ಯರಾಗಿದ್ದರೂ ಶಿವಕುಮಾರ್ ರಾಜಕಾರಣದಲ್ಲಿ ಸಕ್ರಿಯರಾಗಿ ಇರಲಿಲ್ಲ. ಮಾಜಿ ಶಾಸಕ ಬಿ.ಕೆ. ಸಂಗಮೇಶ್ ಅವರೇ ಶಿವಕುಮಾರ್ಗೆ ಬಲ ರಾಮಶೆಟ್ಟಿ ಗಾಣಿಗ ಸಮುದಾಯಕ್ಕೆ ಸೇರಿದ ವಿಐಎಸ್ಎಲ್ ನಿವೃತ್ತ ಕಾರ್ವಿುಕ. ಇವರು ಜೆಡಿಎಸ್ ಅಭ್ಯರ್ಥಿಯಾಗಿದ್ದರೂ ಸಕಾಲಕ್ಕೆ ಬಿ ಫಾರಂ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ರಾಮಶೆಟ್ಟು ಅವರ ಗೆಲುವು ಶಾಸಕ ಅಪ್ಪಾಜಿಯ ಪ್ರತಿಷ್ಠೆ ಪ್ರಶ್ನೆ.

ವಿಶೇಷವಾಗಿ ಶಾಸಕ ಅಪ್ಪಾಜಿ ಅವರ ತವರು ಮನೆ ಎಂದು ಬಿಂಬಿತವಾಗಿರುವ ವಾರ್ಡ್ ನಂ. 31ರ ಉಪಚುನಾವಣೆಯಲ್ಲಿ ರಾಮಶೆಟ್ಟಿ ಅವರನ್ನು ಗೆಲ್ಲಿಸಿಕೊಂಡು ಬರುವುದು ಒಂದು ರೀತಿ ಪ್ರತಿಷ್ಠೆ ಪ್ರಶ್ನೆಯಾಗಿದೆ.

ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್ ಮೊದಲ ಉಪ ಚುನಾವಣೆಯಲ್ಲಿ ಸೋತು ಒಂದು ಸ್ಥಾನ ಕಳೆದುಕೊಂಡಿತ್ತು. 31ನೇ ವಾರ್ಡಿನ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಾರ್ಡನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಶಾಸಕ ಅಪ್ಪಾಜಿ ಇದ್ದಾರೆ.

ಫಲಿತಾಂಶ ಏನೇ ಆದರೂ ನಗರಸಭೆಯಲ್ಲಿ ಜೆಡಿಎಸ್ ಅಧಿಪತ್ಯಕ್ಕೆ ಧಕ್ಕೆ ಇಲ್ಲ. ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ದಿನಗಳಲ್ಲಿ ಈ ಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆ ಪ್ರಶ್ನೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕೆ ಇಳಿಯಲಿರುವ ಬಿ.ಕೆ.ಸಂಗಮೇಶ್ಗೆ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆ.

ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯೊಂದರ ವಾರ್ಡಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೌಣ. ಪಕ್ಷ ಹಾಗೂ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ನಾಯಕರ ಶಕ್ತಿ ಸಾಮಥ್ಯವೇ ನಿರ್ಣಾಯಕ

ಶಾಸಕ ಅಪ್ಪಾಜಿ ತಂತ್ರಗಾರಿಕೆ

ಬಿ ಫಾರಂ ಸಕಾಲದಲ್ಲಿ ತಲುಪಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸ್ಪರ್ಧೆ ಮಾಡಿಲ್ಲ ಎಂಬುದು ಮೇಲ್ನೋಟದ ಸತ್ಯ. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಈ ವಾರ್ಡಿನಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದ್ದು, ಒಬ್ಬರಿಗೆ ಟಿಕೆಟ್ ಕೊಟ್ಟು ಇತರರನ್ನು ಎದುರು ಹಾಕಿಕೊಳ್ಳುವುದು ಶಾಸಕ ಅಪ್ಪಾಜಿ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಇದು ಶಾಸಕರ ತಂತ್ರಗಾರಿಕೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿ ರಾಮಕೃಷ್ಣೇಗೌಡ, ಪಕ್ಷೇತರರಾಗಿ ರಾಮಶೆಟ್ಟಿ, ಕೆ. ಕುಮಾರ್ ಮತ್ತು ನರಸಿಂಹೇಗೌಡ ನಾಮಪತ್ರ ಸಲ್ಲಿಸಿದ್ದರು. ಸಕಾಲದಲ್ಲಿ ಬಿ ಫಾರಂ ತಲುಪಲಿಲ್ಲ. ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ರಾಮಕೃಷ್ಣೇಗೌಡ ಅವರ ನಾಮಪತ್ರ ತಿರಸ್ಕೃತಗೊಂಡಿತು. ಪಕ್ಷೇತರಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮೂವರಲ್ಲಿ ರಾಮಶೆಟ್ಟಿ ಹೊರತುಪಡಿಸಿ ಇತರ ಇಬ್ಬರು ಹಿಂತೆಗೆದುಕೊಂಡರು. ಕಣದಲ್ಲಿ ಉಳಿದ ರಾಮಶೆಟ್ಟಿ ಅವರಿಗೆ ಜೆಡಿಎಸ್ ಬೆಂಬಲ ಸಿಕ್ಕಿದೆ.

ಚಿತ್ರಣ ಬದಲಾಗದು

ಉಪಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದರೂ ನಗರಸಭೆಯ ಚಿತ್ರಣ ಬದಲಾವಣೆಯಾಗದು. ಗಳಿಸಿರುವ ಸ್ಥಾನಗಳಲ್ಲಿ ಒಂದು ಸ್ಥಾನ ಏರುಪೇರಾಗಬಹುದೇ ಹೊರತು ಅಧಿಕಾರ ಬದಲಾವಣೆ ಸಾಧ್ಯತೆಗಳು ಇಲ್ಲ. ಒಟ್ಟು 35 ಸ್ಥಾನಗಳಲ್ಲಿ ಈಗ ಜೆಡಿಎಸ್ ಅತ್ಯಧಿಕ (21) ಸ್ಥಾನಗಳನ್ನು ಗಳಿಸಿ ಸರಳ ಬಹುಮತ ಹೊಂದಿದೆ. ಹೀಗಾಗಿ ಉಪಚುನಾವಣೆ ಫಲಿತಾಂಶ ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ.

ಎರಡನೇ ಉಪಚುನಾವಣೆ

ಭದ್ರಾವತಿ ನಗರಸಭೆಯ ಪ್ರಸ್ತುತ ಅವಧಿಯಲ್ಲಿ ಇದು ಎರಡನೇ ಉಪಚುನಾವಣೆ. 15ನೇ ವಾರ್ಡಿನಿಂದ ಆಯ್ಕೆಯಾಗಿದ್ದ ಜೆಡಿಎಸ್ ಸದಸ್ಯೆ ಶಾಂಭವಿ ರಂಗನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೇಣುಕಾ ಆಯ್ಕೆಯಾಗಿದ್ದರು.

ಈಗ 31ನೇ ವಾರ್ಡಿನ ಜೆಡಿಎಸ್ ಸದಸ್ಯ ಜಿ. ರಾಮಕೃಷ್ಣಗೌಡ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ 30ರಂದು ಉಪಚುನಾವಣೆ ನಡೆಯಲಿದೆ.

ಒಟ್ಟು ಸ್ಥಾನಗಳು 35

ಬಿಜೆಪಿ 4 / ಕಾಂಗ್ರೆಸ್ 6 / ಜೆಡಿಎಸ್ 21 / ಪಕ್ಷೇತರರು 3

ಮತದಾರರ ಸಂಖ್ಯೆ

ಒಟ್ಟು ಮತದಾರರು 2949 / ಪುರುಷರು 1373 / ಮಹಿಳೆಯರು 1576

Leave a Reply

Your email address will not be published. Required fields are marked *

Back To Top