More

    ಶಾಸಕರಿಗೇ ದಾರಿ ತಪ್ಪಿಸಲು ಯತ್ನ

    ಕಲಬುರಗಿ: ಶರಣ ಸಿರಸಗಿಯಲ್ಲಿ ಅರಣ್ಯ ಪ್ರದೇಶವಿದೆ, ರಸ್ತೆ ಕಾಮಗಾರಿ ನಡೆಸಲಾಗಿದೆ, ನಮ್ಮ ಹೊಲ ನಮ್ಮ ದಾರಿ' ನಿರ್ಮಿಸಲಾಗಿದೆ... ಹೀಗೆ ಸಾಲು ಸಾಲು ಸುಳ್ಳು ಹೇಳಿದ ಪಂಚಾಯತ್ ರಾಜ್ ಇಲಾಖೆ ಎಇಇ ವಿಜಯಕುಮಾರ ಅವರನ್ನು ಶಾಸಕ ಅಲ್ಲಮ ಪ್ರಭು ಪಾಟೀಲ್ ತರಾಟೆಗೆ ತೆಗೆದುಕೊಂಡರು.

    ಗರದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಮಾಹಿತಿ ಪಡೆದು, ಕಾಮಗಾರಿ ಪರಿಶೀಲನೆ ನಡೆಸಿದರು. ಪಂಚಾಯತ್ ರಾಜ್ ಇಲಾಖೆ ಎಇಇ ವಿಜಯಕುಮಾರ ಮಾತನಾಡಿ, ಸೈಯದ್ ಚಿಂಚೋಳಿಯಲ್ಲಿ ೧೦ ಲಕ್ಷ ರೂ. ರಸ್ತೆ ಕಾಮಗಾರಿ ನಡೆಸಲಾಗಿದೆ ಎಂದು ಸಭೆಗೆ ತಿಳಿಸಿದರು. ಶಾಸಕ ಪಾಟೀಲ್ ಮಾತನಾಡಿ, ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ. ಕಾಮಗಾರಿ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ?. ನಿಮ್ಮ ಮನಸ್ಸಿಗೆ ಬಂದAತೆ ಹೇಳಿದರೆ ಕೇಳಲು ನಾವು ಇಲ್ಲಿ ಕುಳಿತ್ತಿಲ್ಲ ಎಂದು ಜಾಡಿಸಿದರು.

    ರಣ ಸಿರಸಗಿ ಗ್ರಾಮದ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಅಭಿವೃದ್ಧಿಪಡಿಸುತ್ತಿದ್ಧೇವೆ ಎಂದು ಹೇಳುತ್ತಿದ್ದಂತೆ ಅಲ್ಲಿ ಎಲ್ಲಿ ಅರಣ್ಯ ಪ್ರದೇಶವಿದೆ ಎಂದು ಶಾಸಕ ಪಾಟೀಲ್ ಮರು ಪ್ರಶ್ನೆ ಹಾಕಿದರು. ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಎಫ್‌ಒ ಸಚಿನ್ ಪಾಟೀಲ್, ಅಲ್ಲಿ ಯಾವುದೇ ಅರಣ್ಯ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಕ್ಷೇತ್ರದ ಹಳ್ಳಿಗಳಲ್ಲಿ ನರೇಗಾದನಮ್ಮ ಹೊಲ ನಮ್ಮ ದಾರಿ’ ಯೋಜನೆ ಅಡಿ ಉದನೂರ, ಭೀಮಳ್ಳಿ ಸೇರಿ ವಿವಿಧ ಗ್ರಾಪಂಗಳಲ್ಲಿ ನಡೆದ ಕಾಮಗಾರಿಗಳ ಮಾಹಿತಿ ಪಿಡಿಒಗಳಿಗೇ ಇಲ್ಲ. ಈ ಕುರಿತು ಆರ್‌ಡಿಪಿಆರ್ ಎಇಇ ಕಾಮಗಾರಿ ನಡೆದಿದೆ ಎಂದು ತಿಳಿಸಿದರು. ಈ ಬಗ್ಗೆ ಪಿಡಿಒಗಳನ್ನು ವಿಚಾರಿಸಿದಾಗ ಯಾವುದೇ ಕಾಮಗಾರಿ ನಡೆದಿಲ್ಲ. ನಮಗೆ ಗೊತ್ತಿಲ್ಲ ಎಂದು ಎಇಇ ಎದುರೇ ಬಹಿರಂಗ ಪಡಿಸಿದರು.
    ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಕಡಣಿಯಿಂದ – ತೆಗನೂರು – ಪಾಣೆಗಾಂವ್‌ವರೆಗೆ ರಸ್ತೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿ. ಗ್ರಾಮೀಣ ಭಾಗದಲ್ಲಿ ಹಲವು ರಸ್ತೆಗಳು ಹಾಳಾಗಿದ್ದು, ತಗ್ಗು ದಿಣ್ಣೆಗಲಿಂದ ಕೂಡಿದೆ. ಅದನ್ನು ಮರು ರಿಪೇರಿ ಮಾಡುವಂತೆ ಸೂಚಿಸಿದರು.
    ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಸೈಯದ್ ಪಟೇಲ್, ನರೇಗಾ ಸಹಾಯ ನಿರ್ದೇಶಕ ರೇವಣಸಿದ್ದಪ್ಪ ಕೆ.ಗೌಡರ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts