ಶಾಲೆಗೆ ಶಿಕ್ಷಕರೇ ಚಕ್ಕರ್​…!

blank
blank

ಬೆಳಗಾವಿ: ಕರೊನಾ ಕಾಲದ ಕಲಿಕಾ ನಷ್ಟ ಸರಿದೂಗಿಸುವುದಕ್ಕಾಗಿ 2022&23ರ ಶೈಕ್ಷಣಿಕ ವರ್ಷವನ್ನು ಸರ್ಕಾರ “ಕಲಿಕಾ ಚೇತರಿಕೆ ವರ್ಷ’ ಎಂದು ೂಷಿಸಿದೆ. ಆದರೆ, ಮಕ್ಕಳಿಗಿಂತ ಶಾಲೆಗಳಿಗೆ ಶಿಕ್ಷಕರೇ ಹೆಚ್ಚು ಚಕ್ಕರ್​ ಹಾಕುತ್ತಿರುವ ವ್ಯತಿರಕ್ತ ಬೆಳವಣಿಗೆ ಮಕ್ಕಳ ಕಲಿಕೆ ಕಮರುವಂತೆ ಮಾಡಿದೆ.

ಸುಮಾರು ಎರಡು ವರ್ಷಗಳ ಬಳಿಕ ಭೌತಿಕ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿ ಸಮುದಾಯದಲ್ಲಿ ಕುತೂಹಲದ ಕಲಿಕಾಸಕ್ತಿ ಕಾಣುತ್ತಿದೆ. ಆದರೆ, ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ಲಭ್ಯವಾಗದಿರುವುದು ಮಕ್ಕಳ ಶೈಕ್ಷಣಿಕ ಸುಧಾರಣೆ ಬಯುಸುತ್ತಿರುವ ಪಾಲಕರಲ್ಲಿ ತೀವ್ರ ಅಸಮಾಧಾನ ತಂದಿದೆ.

ಎಸ್​ಡಿಎಂಸಿ ಸದಸ್ಯರು ಹಾಗೂ ಪಾಲಕರು ಸಂಬಂಧ ಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಶೈಕ್ಷಣಿಕ ಸಮನ್ವಯ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಯಲ್ಲಿರುತ್ತಿಲ್ಲ, ತರಗತಿಗಳನ್ನೂ ನಡೆಸುತ್ತಿಲ್ಲ ಎಂದು ದೂರು ನೀಡಿ ರೋಸಿ ಹೋಗಿದ್ದಾರೆ. ತಮ್ಮ ವಿರುದ್ಧ ಮಾತನಾಡುವ ಅದೇ ಶಾಲೆಯ ಶಿಕ್ಷಕರಿಗೆ ಜಿಲ್ಲಾ ಮತ್ತು ತಾಲೂಕುಮಟ್ಟದ ಶಿಕ್ಷಕರ ಸಂದ ಪದಾಧಿಕಾರಿಗಳ ಹೆಸರಲ್ಲಿ ಒತ್ತಡ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪತ್ರಿಕೆ ಜತೆ ಮಾತನಾಡಿದ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕ್ಕೆ ಮುಂದಾದರೆ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಮೂಲಕ ನಮಗೂ ತೊಂದರೆ ನೀಡುತ್ತ ತಮ್ಮನ್ನು ಯಾರೂ ಪ್ರಶ್ನಿಸಕೂಡದು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಶಾಲೆಗಳಲ್ಲಿ ಶಿಕ್ಷಕರ ಅನಧಿಕೃತ ಹಾಜರಿ ಹಾವಳಿ ಬಿಚ್ಚಿಟ್ಟರು.

ಸಂದ ಪದಾಧಿಕಾರಿಗಳು ಶಿಕರಿಗೆ ಗರಿಷ್ಟ ಸೌಲಭ್ಯ ಒದಗಿಸಲು ಮತ್ತು ಪ್ರಾಮಾಣಿಕ ಶಿಕರಿಗೆ ಪ್ರೋತ್ಸಾಹಿಸಬೇಕೆ ಹೊರತು ಅಧಿಕಾರಿಗಳಿಗೆ ಕಿರುಕುಳವನ್ನಲ್ಲ. ಸಂಟನೆ ನೆಪದಲ್ಲಿ ಶೈಕ್ಷಣಿಕ ಚಟುವಟಿಕೆಯಿಂದ ವಿಮುಖವಾಗಿರುವ ಪದಾಧಿಕಾರಿಗಳನ್ನು ಹೆಡೆಮುರಿ ಕಟ್ಟಿ, ಬಿಸಿ ಮುಟ್ಟಿಸಿದ್ದ ಮೇಜರ್​ ಸಿದ್ಧಲಿಂಗಯ್ಯ ಹಿರೇಮಠ ನೆನಪಾಗುತ್ತಾರೆ ಎನ್ನುತ್ತಿದೆ ಪ್ರಾಮಾಣಿಕ ಶಿಕ್ಷಕಕರ ಸಮುದಾಯ.

ಕ್ರಮಕ್ಕೆ ಹಿಂದೇಟು!: ಇತ್ತೀಚೆಗೆ ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರೇ ಇಲ್ಲದೆ ವಿದ್ಯಾರ್ಥಿಗಳೇ ಪ್ರಾರ್ಥನೆ ನಡೆಸಿದ್ದರು. ಇದನ್ನು ಸ್ವತ@ ಎಸ್​ಡಿಎಂಸಿ ಸದಸ್ಯರು ಪಾಲಕರ ಮೂಲಕ ಮೊಬೈಲ್​ನಲ್ಲಿ ಚಿತ್ರೀಕರಿಸಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಬಳಿಕ ಎಚ್ಚೆತ್ತ ಗ್ರಾಮೀಣ ಬಿಇಒ ರುದ್ರಗೌಡ ಜುಟ್ಟನವರ ಶಾಲೆಯಲ್ಲಿ ಬಯೋಮೆಟ್ರಿಕ್​ ಅಳವಡಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಈವರೆಗೂ ಯಾವುದೇ ಕ್ರಮದ ಬಗ್ಗೆ ಧ್ವನಿ ಎತ್ತದಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಾಮಾಣಿಕ ಶಿಕ್ಷಕರಲ್ಲಿ ಬೇಸರ: ಅನಧಿಕೃತ ರಜೆ ಇರುವ ಶಿಕ್ಷಕರು ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡುವ ವಿಷಯ ತಿಳಿದ ತಕ್ಷಣ ತಮ್ಮ ರಜೆ ಅಧಿಕೃತಗೊಳಿಸುವಂತೆ ಮುಖ್ಯಶಿಕ್ಷಕರಿಗೆ ತಿಳಿಸುತ್ತಾರೆ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾಜರಿದ್ದ ಶಿಕರಿಗೆ ನೂರಾರು ಪ್ರಶ್ನೆ ಕೇಳುತ್ತಾರೆ. ಇದರಿಂದ ಪ್ರಾಮಾಣಿಕ ಶಿಕ್ಷಕರಿಗೆ ಬೇಸರವಾಗುತ್ತಿದೆ.

ಸರ್ಕಾರ ಸುತ್ತೋಲೆಯ ಪ್ರಕಾರ ಮಾನ್ಯತೆ ಪಡೆದ ಸಂಗಳ ಅಧ್ಯರು ಕಾರ್ಯದರ್ಶಿಗಳಿಗೆ ಶಾಲಾವಧಿಯಲ್ಲಿ ಮೇಲಧಿಕಾರಿಗಳ ಭೇಟಿಗೆ ಅವಕಾಶ ನೀಡಿದ್ದು, ಇದರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಶಿಕರ ಸಂದ ಪದಾಧಿಕಾರಿಗಳು ಬೋಧನೆಯಿಂದ ವಿಮುಖವಾಗುತ್ತಿದ್ದಾರೆ. ಈ ಬೆಳವಣಿಗೆಗೆ ಕಡಿವಾಣ ಹಾಕದ ಮೇಲಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲೆಲ್ಲಿ ದೂರು ಬಂದಿದೆಯೋ ಅಲ್ಲೆಲ್ಲ ಬಯೋಮೆಟ್ರಿಕ್​ ಅಳವಡಿಕೆಗೆ ಕ್ರಮ ಜರುಗಿಸಲಾಗುತ್ತಿದೆ. ಅರಳೀಕಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಶೀಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಬಿಇಒಗೆ ಸೂಚಿಸಿದ್ದೇನೆ.
|ಬಸವರಾಜ ನಾಲತವಾಡ, ಡಿಡಿಪಿಐ ಬೆಳಗಾವಿ

| ಶಿವಾನಂದ ಕಲ್ಲೂರ

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…