ಶಾಲಾ ವಿದ್ಯಾರ್ಥಿಗಳಿಂದ ಸಂಭ್ರಮದ ಸಂಕ್ರಾAತಿ ಆಚರಣೆ

blank

ಚಿಕ್ಕಮಗಳೂರು: ಶಾಲಾವರಣದಲ್ಲಿ ಹಸು, ಕರುಗಳ ಓಡಾಟ, ಮಕ್ಕಳ ಮನಸ್ಸಿನಲ್ಲಿ ಎಲ್ಲೂ ಸಿಗದಷ್ಟು ಸಂತೋ, ತಮ್ಮ ಮನೆಯ ಮುದ್ದು ಪ್ರಾಣಿಗಳಂತೆ ಲಾಲನೆ, ಪಾಲನೆಯಲ್ಲಿ ತೊಡಗಿಕೊಂಡ ನರ್ಚರ್ ಇಂಟರ್ ನ್ಯಾಷನಲ್ ಶಾಲಾ ವಿದ್ಯಾರ್ಥಿಗಳಿಗೆ ಸಂಕ್ರಾAತಿ ಸಂಭ್ರಮದ ಅದ್ಬುತ ಕ್ಷಣಗಳನ್ನು ಗ್ರಾಮೀಣ ಸೊಗಡಿನಲ್ಲಿ ಶನಿವಾರ ಪರಿಚಯಿಸಲಾಯಿತು.

ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಗ್ರಾಮೀಣ ಶೈಲಿಯ ಲಂಗ ದಾವಣಿ, ಪಂಚೆಶರ್ಟ್ ಧರಿಸಿಕೊಂಡು ಶಾಲಾ ಆವರಣದಲ್ಲಿ ಸಂಕ್ರಾAತಿ ಆಚರಣೆ ಪೂರ್ವತಯಾರಿಗಳಲ್ಲಿ ಮುಂದಾದರು. ಗುಡಿಸಲು ನಿರ್ಮಾಣ, ಎತ್ತಿನಗಾಡಿಯಲ್ಲಿ ಪಯಣ ಹಾಗೂ ಪೊಂಗಲ್ ತಯಾರಿಸಿ ಹಬ್ಬದೂಟದಂತೆ ಎಲ್ಲರನ್ನೂ ಆಹ್ವಾನಿಸುವ ಕರೆಯೋಲೆಗಳು ಕಂಡವು.
ಸAಕ್ರಾAತಿ ಸಂಭ್ರಮದಲ್ಲಿ ಹಸು-ಕರುಗಳನ್ನು ಕರೆತಂದ ಪರಿಣಾಮ ಕಂಡುಕಾಣದ ಸಂತೋಷ ಮಕ್ಕಳ ಮುಖದಲ್ಲಿ ವ್ಯಕ್ತವಾಯಿತು. ಸರದಿ ಸಾಲಿನಂತೆ ಮಕ್ಕಳು ಗೋವಿಗೆ ಹಣ್ಣು ತಿಳಿಸುವ ಮೂಲಕ ಗೋವುಗಳೊಂದಿಗೆ ಸಂಭ್ರಮಿಸಿದರು.
ಬಳಿಕ ಹಬ್ಬದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಸಂಸ್ಕೃತಿಯ ವೇಷಭೂಷಣದಲ್ಲಿ ಜಾನಪದ, ಭಕ್ತಿಗೀತೆಗಳನ್ನು ಹಾಡಿ ಸಭಿಕರನ್ನು ಮನರಂಜಿಸಿದರು. ಎಳ್ಳುಬೆಲ್ಲ ಸಿಹಿಯನ್ನು ಹಂಚಿ ಸಂಕ್ರಾAತಿ ಶುಭಗಳಿಗೆಯ ಕ್ಷಣಗಳನ್ನು ಹಬ್ಬದ ಮುನ್ನವೇ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ನೀಡಿ ಕುಟುಂಬದಲ್ಲಿ ಆಚರಿಸುವಂತೆ ಪ್ರೇರೇಪಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಮಧೇನು ಗೋಶಾಲೆಯ ಸಂಜಿತ್ ಸುವರ್ಣ ಮಾತನಾಡಿ, ಸಂಕ್ರಾAತಿ ಹಬ್ಬವು ಜಾತಿ, ಧರ್ಮ ಮೀರಿ ಪ್ರತಿ ಜನಾಂಗವು ಆಚರಿಸುವಂಥ ಹಬ್ಬವಾಗಿದೆ. ಮುಖ್ಯವಾಗಿ ರೈತಾಪಿ ವರ್ಗವು ಭೂಮಿಪೂಜೆ ಸೇರಿದಂತೆ ಪಂಚಭೂತಗಳನ್ನು ಪೂಜಿಸುವ ಪರಂಪರೆ ಸಂಕ್ರಾAತಿ ಹಬ್ಬ ದಲ್ಲಿ ಆಳವಾಗಿ ಅಡಗಿದೆ ಎಂದರು.
ಇತ್ತೀಚೆಗೆ ಗ್ರಾಮೀಣ ಪ್ರದೇಶಗಳು ಪಟ್ಟಣಗಳಾಗುತ್ತಿವೆ. ಹಳ್ಳಿ ಸಂಸ್ಕೃತಿ ಮರೆಯಾಗುತ್ತಿವೆ. ಮನೆಗಳಲ್ಲಿ ಗೋವು ಸಾಕಣೆ ಹಾಗೂ ಸಣ್ಣಪುಟ್ಟ ಸಸ್ಯಪ್ರಬೇಧಗಳನ್ನು ಬೆಳೆಸುವುದು ಬದಲಾಗಿದೆ. ಆಧುನಿಕತೆ ಬೆಳೆದಂತೆ ಮನೆಯಂಗಳದಲ್ಲಿ ಶ್ವಾನಗಳ ಸಾಕಾಣೆ, ಆರೋಗ್ಯಯುತ ಶರೀರಕ್ಕೆ ಉಪಯೋಗಕ್ಕೆ ಬಾರದ ಗಿಡಗಂಟಿಗಳಿAದ ಶೃಂಗರಿಸಲಾಗುತ್ತಿವೆ ಎಂದರು.
ಎಳೆವಯಸ್ಸಿನಿAದ ಮಕ್ಕಳಿಗೆ ಕೇವಲ ಕಲಿಕೆಗೆ ಹೆಚ್ಚು ಒತ್ತು ನೀಡಿ, ಸಾಮಾಜಿಕ ಅರಿವು, ಪ್ರಾಣಿಪಕ್ಷಿಗಳ ಪರಿಚಯ, ಔಷಧ ಸಸ್ಯಗಳ ಗುರುತಿಸುವಿಕೆ, ಮೊಬೈಲ್ ಹೊರತಾಗಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಪಾಲಕರು ಪರಿಚಯಿಸಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳು ಆಟಿಕೆ ಗೊಂಬೆಗಳಾಗದೇ ನೈಜತೆಯ ಬದುಕು ಸಾಗಿಸುತ್ತಾರೆ
ಶಾಲೆಯ ರಜೆ ದಿನಗಳಲ್ಲಿ ವಿದೇಶ ಅಥವಾ ಮಹಾನಗರದ ಆಧುನಿಕತೆ ಪರಿಚಯಿಸುವ ಮೊದಲು ಹಳ್ಳಿಗಾಡಿನ ಗಂಧ-ಗಾಳಿಯನ್ನು ಪರಿಚಯಿಸಬೇಕು. ಮಕ್ಕಳಿಗೆ ಹಿರಿಯರನ್ನು ಗೌರವಿಸುವ ಸಂಪ್ರದಾಯ, ಸನ್ನಡತೆ, ರಾಷ್ಟçದ ಆಗುಹೋಗುಗಳನ್ನು ಬೋಧಿಸಬೇಕು. ಅಂಕದ ಜೊತೆ ಜೊತೆಗೆ ಸಮಾಜದಲ್ಲಿ ಬದುಕುವ ನೈತಿಕ ಮೌಲ್ಯಗಳನ್ನು ತಿಳಿಸುವಲ್ಲಿ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಮಧೇನು ಗೋ ಶಾಲೆಯ ಶರತ್ ಹಾಗು ಶಾಲೆಯ ಪ್ರಾಚಾರ್ಯೆ ಸುಪ್ರೀಯಾ, ಉಪ ಪ್ರಾಚಾರ್ಯೆ ನಜ್‌ಮುಸ್, ಪ್ರಮುಖರಾದ ರಾಕೇಶ್, ಪ್ರೀತೇಶ್, ಪುಷ್ಪರಾಜ್ ಮತ್ತಿತರರಿದ್ದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…