ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಸುಮಾರು 3 ಎಕರೆ ಕಬ್ಬು ಬುಧವಾರ ಬೆಂಕಿಗಾಹುತಿಯಾಗಿದೆ. ಫಕೀರಪ್ಪ ಬಸಲಿಂಗಪ್ಪ ಮುತ್ನಾಳ ಎಂಬುವರ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈತರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
ಉಳ್ಳಾಗಡ್ಡಿ-ಖಾನಾಪುರ ವರದಿ: ಸಮೀಪದ ಯಮಕನಮರಡಿ ಗ್ರಾಮದಲ್ಲಿ ಬುಧವಾರ ಕೆಂಪಣ್ಣ ದುಂಡಪ್ಪ ಯಾದವಾಡಿ ಎಂಬುವವರಿಗೆ ಸೇರಿದ 1 ಎಕರೆ 33 ಗುಂಟೆ ಕಬ್ಬು ಸಂಪೂರ್ಣ ಸುಟ್ಟಿದೆ. ಹೊಲದಲ್ಲಿದ್ದ ಡ್ರಿಪ್ ಪೈಪ್ ಹಾಗೂ ಇನ್ನಿತರ ಸಾಮಗ್ರಿ ಸುಟ್ಟಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಉಪತಹಸೀಲ್ದಾರ್ ಎಸ್.ಜೆ. ಸಾಳುಂಕೆ, ಗ್ರಾಮ ಲೆಕ್ಕಾಧಿಕಾರಿ ವಿ.ಕೆ. ಮಾಳಗೇರ ಭೇಟಿ ನೀಡಿ ಪರಿಶೀಲಿಸಿದ್ದಾರೆ.