ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ

ಹೊಳೆಹೊನ್ನೂರು: ಭದ್ರಾವತಿ ತಾಲೂಕು ಚಂದನಕೆರೆಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಗುರುವಾರ ಮನೆಗೆ ಬೆಂಕಿಹೊತ್ತಿ ನಗ, ನಗದು ಸುಟ್ಟು ಭಸ್ಮವಾಗಿದೆ. ನೌಲೇಶಪ್ಪ ಅವರ ಕೆಂಪು ಹಂಚಿನ ಮನೆ ಬೆಂಕಿಗೆ ಆಹುತಿ ಆಗಿದ್ದು, ಬ್ಯಾಂಕ್​ಗೆ ಸಾಲ ಕಟ್ಟಲು ಇಟ್ಟಿದ್ದ 1.50 ಲಕ್ಷ ರೂ. ನಗದು, 25 ಗ್ರಾಂ ಚಿನ್ನಾಭರಣ, ಆಹಾರ ಸಾಮಗ್ರಿ ಹಾಗೂ ಬಟ್ಟೆಗಳು ಸಂಪೂರ್ಣ ಸುಟ್ಟು ಭಸ್ಮ ಆಗಿವೆ. ನೌಲೇಶಪ್ಪ ಕುಟುಂಬ ಕೂಲಿ ಕೆಲಸಕ್ಕೆ ಹೋಗಿದ್ದಾಗ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಮನೆಯನ್ನು ಆವರಿಸಿಕೊಂಡಿದೆ. ಇದನ್ನು ಗಮನಿಸಿದ ಪಕ್ಕದ ಮನೆಯವರು ಹಾಗೂ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ನೀರು ಹಾಕಿ ಸಂದಿಸಲು ಶ್ರಮಿಸಿದ್ದಾರೆ, ಬಳಿಕ ಅಗ್ನಿ ಶಾಮಕದಳ ಆಗಮಿಸಿ ಪೂರ್ಣ ಬೆಂಕಿ ನಂದಿಸಿದೆ.