ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಬೆಂಕಿಗಾಹುತಿ

ಮುಂಡರಗಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣ ಕಬ್ಬು ಬೆಳೆ ನಾಶವಾದ ಘಟನೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಸರೋಜಾ ಸುರೇಶ ಹಳ್ಯಾಳ ಅವರಿಗೆ ಸೇರಿದ 11 ಎಕರೆ ಕಬ್ಬಿನ ಗದ್ದೆಯಲ್ಲಿ ಅಂದಾಜು 9 ಎಕರೆ ಕಬ್ಬಿನ ಬೆಳೆ ನಾಶವಾಗಿ, ಅಪಾರ ನಷ್ಟವಾಗಿದೆ. ಗದ್ದೆ ಪಕ್ಕದಲ್ಲಿ ಬೆಳೆಸಲಾಗಿದ್ದ ಸುಮಾರು ನೂರಾರು ಸಾಗವಾನಿ ಗಿಡಗಳು ಬೆಂಕಿಗಾಹುತಿಯಾಗಿವೆ. ಮಾರಾಟ ಮಾಡುವುದಕ್ಕಾಗಿ ಸಾಗವಾನಿ ಗಿಡಗಳನ್ನು ಕಡಿಸಿ ಗದ್ದೆ ಪಕ್ಕದಲ್ಲಿ ಹೊಂದಿಸಿ ಇಡಲಾಗಿತ್ತು. ಕಬ್ಬಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸಾಗವಾನಿ ಬಡ್ಡೆಗಳು ಬೆಂಕಿಗೆ ಸುಟ್ಟಿವೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆಸ್ಕಾಂ ಎಇಇ ಎಂ.ಬಿ. ಗೌರೋಜಿ, ಇದಕ್ಕೆ ಸರ್ಕಾರದಿಂದ ದೊರೆಯುವ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಹಗಲು ರಾತ್ರಿ ಶ್ರಮಪಟ್ಟು ಬೆಳೆದ ಬೆಳೆಗೆ ಹೆಸ್ಕಾಂ ವಿದ್ಯುತ್ ಅವಘಡದಿಂದ 9 ಎಕರೆ ಕಬ್ಬು ಮತ್ತು 200ರಿಂದ 300 ಸಾಗವಾನಿ ಗಿಡಗಳು ಬೆಂಕಿಗೆ ಸುಟ್ಟಿರುವುದರಿಂದ ತುಂಬಾ ನೋವಾಗಿದೆ. ಕಳೆದ ವರ್ಷವು ಇದೇ ರೀತಿವಿದ್ಯುತ್ ಅವಘಡ ಸಂಭವಿಸಿ ಕಬ್ಬು ನಾಶವಾಗಿತ್ತು. ಈ ವರ್ಷವು ಮತ್ತೆ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ನಾಶವಾಗಿರುವುದು ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸರೋಜಾ ಅವರ ಸಹೋದರ ಮಂಜುನಾಥ ಹಂಚಿನಾಳ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶ್ಯಾಗೋಟಿ ಗ್ರಾಮದಲ್ಲಿ: ಶಾರ್ಟ್​ಸರ್ಕ್ಯೂಟ್​ನಿಂದ 2.14 ಎಕರೆ ಕಬ್ಬಿನ ಗದ್ದೆ ಸುಟ್ಟು ಕರಕಲಾದ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ಶನಿವಾರ ಸಂಭವಿಸಿದೆ. ಕೈಗೆ ಬಂದ ಫಸಲು ಸುಟ್ಟು ಹೋಗಿದ್ದು, ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದೇನೆ. ಆದ್ದರಿಂದ ಸೂಕ್ತ ಪರಿಹಾರ ನೀಡಬೇಕೆಂದು ಸಂತ್ರಸ್ತ ರೈತ ಗ್ರಾಮದ ಹನುಮಪ್ಪ ಬಾಳಪ್ಪ ತಳವಾರ ಮನವಿ ಮಾಡಿಕೊಂಡಿದ್ದಾರೆ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…