ಶಾರದಾ ಹಗರಣದಲ್ಲಿ ಚಿದಂಬರಂ ಪತ್ನಿ ನಳಿನಿ

ಕೋಲ್ಕತ: ಪಶ್ಚಿಮ ಬಂಗಾಳದ ಶಾರದಾ ಚಿಟ್ ಫಂಡ್ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಹೆಸರು ಕೇಳಿಬಂದಿದೆ. ಬರಸಾತ್ ಕೋರ್ಟ್​ಗೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಅವರ ಹೆಸರು ಉಲ್ಲೇಖವಾಗಿದೆ. ಶಾರದಾ ಚಿಟ್ ಫಂಡ್​ನಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಹಗರಣದ ಸಂಚಿನಲ್ಲಿ ನಳಿನಿ ಕೂಡ ಸಹಭಾಗಿದಾರರು. 2010-2014ರ ಅವಧಿಯಲ್ಲಿ  1.40 ಕೋಟಿ ಲಂಚವನ್ನು ಅವರು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಶಾರದಾ ಚಿಟ್ ಫಂಡ್​ನ ಪ್ರವರ್ತಕ ಸುದೀಪ್ತಾ ಸೇನ್ ಈ ಹಗರಣದ ಪ್ರಮುಖ ಆರೋಪಿ. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಜನರಿಂದ  2,500 ಕೋಟಿ ಠೇವಣಿ ಸಂಗ್ರಹಿಸಿ ವಂಚಿಸಿದ್ದ.

ಚಿದುಗೆ ಬಂಧನ ಭೀತಿಯಿಲ್ಲ : ಏರ್​ಸೆಲ್-ಮ್ಯಾಕ್ಸಿಸ್ ಪ್ರಕರಣದ ಆರೋಪಿಗಳಾದ ಪಿ. ಚಿದಂಬರಂ, ಪುತ್ರ ಕಾರ್ತಿಯನ್ನು ಫೆ. 1ರವರೆಗೆ ಬಂಧಿಸದಂತೆ ದೆಹಲಿಯ ಸಿಬಿಐ ವಿಶೇಷ ಕೋರ್ಟ್ ಆದೇಶಿಸಿದೆ. ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ (ಎಫ್​ಐಪಿಬಿ) ನಿಯಮ ಉಲ್ಲಂಘಿಸಿ ಏರ್​ಸೆಲ್-ಮ್ಯಾಕ್ಸಿಸ್ ಹೂಡಿಕೆ ಒಪ್ಪಂದಕ್ಕೆ ನೆರವು ನೀಡಿದ ಆರೋಪ ಕಾರ್ತಿ ಮೇಲೆ ಇದೆ. ಈ ಪ್ರಕರಣ ನಡೆದಾಗ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದರು. ಅವರ ಪ್ರಭಾವ ಬಳಸಿ ಅಕ್ರಮ ನಡೆಸಲಾಗಿದೆ. ಹೀಗಾಗಿ ಚಿದಂಬರಂ ಕೂಡ ಇದರಲ್ಲಿ ಭಾಗಿಯಾಗಿದ್ದರೆಂದು ಸಿಬಿಐ ಆರೋಪಿಸಿದೆ.

Leave a Reply

Your email address will not be published. Required fields are marked *