ಶಾಂತಿ ಸಂದೇಶ ಸಾರಿದ ಜಗದ್ಗುರು ರೇಣುಕಾಚಾರ್ಯ

ಮುಂಡರಗಿ: ಜಗದ್ಗುರು ರೇಣುಕಾಚಾರ್ಯರ ಕಾಲಮಾನದಲ್ಲಿ ಎಲ್ಲ ವರ್ಗದ ಜನರನ್ನು ಮೇಲೆತ್ತುವ ಕಾರ್ಯ ನಡೆದಿತ್ತು. ಬಡವ ಶ್ರೀಮಂತವೆಂಬ ಭೇದ-ಭಾವವಿಲ್ಲದೆ ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿ ಸುಸಂಸ್ಕೃತ ಸಮಾಜ ನಿರ್ವಣಕ್ಕೆ ಮುಂದಾದರು ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ಮಹಿಳಾ ಮತ್ತು ಯುವ ಘಟಕದ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಸಮಾಂರಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಾತಿಗಿಂತ ನೀತಿ ಮೇಲು, ತತ್ತ್ವಕ್ಕಿಂತ ಆಚಾರ ಮೇಲು, ದಾನಕ್ಕಿಂತ ದಾಸೋಹ ಮೇಲು ಎಂಬ ಉತ್ತಮ ಸಂದೇಶ ನೀಡಿದರು. ಕಲ್ಲನ್ನು ಲಿಂಗ ಸ್ವರೂಪಿಯಾಗಿ ತೋರಿಸಿದ್ದು ರೇಣುಕಾಚಾರ್ಯರು ಎಂದರು.

ಕಲಕೇರಿ-ವಿರುಪಾಪೂರದ ಶ್ರೀ ಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಇದಕ್ಕೂ ಮುನ್ನ ವೀರಭದ್ರೇಶ್ವರ ದೇವಸ್ಥಾನದಿಂದ ಮಹಿಳಾ ಡೊಳ್ಳಿನ ಮೇಳ, ಪೂರ್ಣಕುಂಭದೊಂದಿಗೆ ಪ್ರಮುಖ ಬೀದಿಗಳಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಜರುಗಿತು.

ಗುರುಮೂರ್ತಿಸ್ವಾಮಿ ಅಳವಂಡಿ, ಕಾಂತರಾಜ ಹಿರೇಮಠ, ವೀರೇಶ ಮುತ್ತಿನಪೆಂಡಿಮಠ, ಜಗದೀಶ ಪತ್ರಿಮಠ, ಕೊಟ್ರಯ್ಯ ಗುಜಮಾಗಡಿಮಠ, ಕೆ.ವಿ. ಹಿರೇಮಠ, ನಾಗರತ್ನ ಹಿರೇಮಠ, ಲಲಿತಾ ಹಿರೇಮಠ, ಯು.ಸಿ. ಹಂಪಿಮಠ, ವಿರೂಪಾಕ್ಷಯ್ಯ ಡಂಬಳಮಠ, ಬಸವರಾಜ ಜಾಗಟಗೇರಿ, ಬಾಲಚಂದ್ರಪ್ಪ ಹಮ್ಮಿಗಿಮಠ, ದೇವಿರಮ್ಮ ಹಿರೇಮಠ, ಶಕುಂತಲಾದೇವಿ ಇಟಗಿಮಠ, ಇತರರಿದ್ದರು. ಎಸ್.ಬಿ. ಹಿರೇಮಠ ನಿರೂಪಿಸಿದರು.

Leave a Reply

Your email address will not be published. Required fields are marked *