ಕೊಡೇಕಲ್: ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ದಲಿತರನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಬಪ್ಪರಗಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ, ಊರಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಊರಲ್ಲಿ ಎರಡು ಸಮುದಾಯದವರ ಜತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲೇ ಬಪ್ಪರಗಿಗೆ ಕೆಟ್ಟ ಹೆಸರು ತರುವಂತಹ ಘಟನೆ ನಡೆದಿರುವುದು ವಿಷಾದದ ಸಂಗತಿ. ಈಗಾಗಲೇ ಅಪ್ರಾಪ್ತೆ ಮೇಲಿನ ಅತ್ಯಾಚಾರ ಸಂಬAಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ದಲಿತರಿಗೆ ಬಹಿಷ್ಕಾರ ಹಾಕಿದ್ದರಿಂದ ಮೂರು ದಿನಗಳಿಂದ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತೆಗೆ ಆತ್ಮಸ್ಥೆÊರ್ಯ ನೀಡುವುದನ್ನು ಬಿಟ್ಟು ಪರಸ್ಪರ ಕಚ್ಚಾಡುವುದು ಸರಿಯಲ್ಲ. ಒಂದು ವೇಳೆ ಮತ್ತೆ ಊರಲ್ಲಿ ಅಹಿತಕರ ಘಟನೆ ನಡೆದರೆ ತಕ್ಷಣವೇ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದರು.
ಗ್ರಾಮಕ್ಕೆ ನಿರಂತರ ಭೇಟಿ ನೀಡಿ ನಿಗಾ ಇರಿಸಬೇಕು. ಶಾಂತಿ ಕದಡುವ ಕರ‍್ಯದಲ್ಲಿ ತೊಡಗುವುದನ್ನು ಕಂಡು ಬಂದರೆ ತಕ್ಷಣ ಅಂಥವರನ್ನು ಕಸ್ಟಡಿಗೆ ತೆಗೆದುಕೊಳ್ಳಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಡಿಸಿ ಸೂಚಿಸಿದರು.
ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ, ಸಿಡಿಪಿಒ ಅನಿಲಕುಮಾರ ಕಾಂಬ್ಳೆ, ಪಿಎಸ್‌ಐ ರಾಜಶೇಖರ ರಾಠೊಡ್, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಪಿಡಿಒ ಪ್ರೇಮಾ ಇತರರಿದ್ದರು.
ಇದಕ್ಕೂ ಮೊದಲು ಡಿಸಿ ನೇರವಾಗಿ ಸಂತ್ರಸ್ತೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನದ ಮಾತು ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು. ಸ್ಥಳದಲ್ಲಿದ್ದ ದಲಿತಪರ ಸಂಘಟನೆ ಮುಖಂಡರೊAದಿಗೆ ಮಾತನಾಡಿದರು.