25.5 C
Bangalore
Monday, December 16, 2019

ಶರಾವತಿ ಅಭಯಾರಣ್ಯಕ್ಕೆ ಹೊನ್ನಾವರ ಅರಣ್ಯ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಹೊನ್ನಾವರ: ತಾಲೂಕಿನ ಅರಣ್ಯ ಭೂಮಿಯನ್ನು ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸುವ ಕುರಿತು ಸರ್ಕಾರ ಜೂನ್ 7ರಂದು ಆದೇಶ ಹೊರಡಿಸಿದ್ದು, ಅರಣ್ಯ ಅತಿಕ್ರಮಣದಾರರಲ್ಲಿ ಆತಂಕವುಂಟು ಮಾಡಿದೆ.

- Advertisement -

ವಾಸ್ತವ್ಯ ಮತ್ತು ಸಾಗುವಳಿಯ ಅವಲಂಬನೆಗಾಗಿ ಅರಣ್ಯ ಹಕ್ಕು ಕಾಯ್ದೆ ಅಡಿ ಭೂಮಿ ಮಂಜೂರಿಗೆ ಸಂಬಂಧಿಸಿ ಆಶಾಭಾವನೆಯಲ್ಲಿರುವಾಗಲೇ ಅಭಯಾರಣ್ಯ ಸೇರ್ಪಡೆ ಆದೇಶವು ಅತಿಕ್ರಮಣದಾರರಿಗೆ ಆಘಾತ ನೀಡಿದ್ದು, ತಾಲೂಕಿನ ಅರಣ್ಯ ಅತಿಕ್ರಮಣದಾರರು ಸಂಘಟಿತರಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಯಾವ್ಯಾವ ಗ್ರಾಮಗಳು: ಹೊನ್ನಾವರ ತಾಲೂಕಿನ 25 ಗ್ರಾಮಗಳು ಅಭಯಾರಣ್ಯ ವ್ಯಾಪ್ತಿಯಲ್ಲಿ ಸೇರಲ್ಪಟ್ಟಿವೆ. ತಾಲೂಕಿನ ಹಿರೇಬೈಲ್, ಹೊಸಗೋಡ, ಜನ್ನಕಡಕಲ್, ಹೊಂಗೇರಿ, ಸಾಲಕೋಡ, ನೀಲಕೋಡ, ಗುಂಡಬಾಳ, ಮಹಿಮೆ, ಹೆರಂಗಡಿ, ತುಂಬೊಳ್ಳಿ, ಸರಳಗಿ, ದುಂಡಮಾವು, ಹುಳೇಗಾರ, ನಗರಬಸ್ತಿಕೇರಿ, ಕಬ್ಬಿನಹಕ್ಕಲ್, ಬೇಗೋಡಿ, ಹಾಡಗೇರಿ, ಖಂಡೋಡಿ, ಶಿರಕೂರು, ಉತ್ಗೇರಿ, ಕೊಡ್ಲಗದ್ದೆ, ಹಸಿಕೇರಿ, ಕೊಪ್ಪ, ಹುಲೇಗಲ್, ಹನೇಹಳ್ಳಿ ಗ್ರಾಮಗಳ 26,675.47 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಭಯಾರಣ್ಯ ವ್ಯಾಪ್ತಿಗೆ ಸೇರಿಸಲಾಗುತ್ತದೆ.

ಜನಜೀವನದ ಮೇಲೆ ಪರಿಣಾಮ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ತಲೆತಲಾಂತರದಿಂದ ಮನೆ ನಿರ್ವಿುಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈಗ ಅಭಯಾರಣ್ಯಕ್ಕೆ ಸೇರಿಸುವ ಪ್ರಕ್ರಿಯೆಗೆ ಮುಂದಾದರೆ ವಾಸ್ತವ್ಯ, ಸಾಗುವಳಿ ಅವಲಂಬಿತವಾಗಿರುವ 400ಕ್ಕೂ ಹೆಚ್ಚು ಅರಣ್ಯ ಅತಿಕ್ರಮಣದಾರರ ಕುಟುಂಬಗಳ ಭೂಮಿ ಹಕ್ಕಿಗೆ ಸಮಸ್ಯೆ ಉಂಟಾಗಲಿದೆ. ಒಂದು ವೇಳೆ ಸರ್ಕಾರದ ಈ ಆದೇಶ ಜಾರಿಯಾದರೆ ಅಲ್ಲಿನ ಜನರು ಗಂಟುಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಬೇಕಾಗಬಹುದು ಎಂಬ ಭಯ ಜನರನ್ನು ಕಾಡುತ್ತಿದೆ. ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿದರೆ, ಕೃಷಿ ಭೂಮಿ ಕಸಿದುಕೊಂಡರೆ ಅವರ ಜೀವನದ ಮೇಲೆ ಬಹು ದೊಡ್ಡ ಪರಿಣಾಮ ಬೀರುವುದು. ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಯಾವ ರೀತಿ ಮಾಡಿಕೊಡಬಹುದು ಎಂಬ ಯಾವ ಅಂಶವನ್ನೂ ಆದೇಶದಲ್ಲಿ ಹೇಳಿಲ್ಲ. ಇದರಿಂದ ಅರಣ್ಯ ಅತಿಕ್ರಮಣದಾರರು ಕಂಗಾಲಾಗಿದ್ದಾರೆ.

ಜಾಗೃತಿ ಸಭೆ: ಅನನುಕೂಲಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಶರಾವತಿ ಅಭಯಾರಣ್ಯ- ಜಾಗೃತಿ ಸಭೆ’ಯನ್ನು ಸೆ. 22ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಉಪ್ಪೋಣಿ ದೇವರಗದ್ದೆ ಸಭಾಭವನದಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗೂ ಅರಣ್ಯ ಅತಿಕ್ರಮಣದಾರರು ಪಾಲ್ಗೊಳ್ಳುವರು.

ಜಿಲ್ಲೆಯ ಅರಣ್ಯ ಪ್ರದೇಶವನ್ನು ಜನಾಭಿಪ್ರಾಯ ಸಂಗ್ರಹಿಸದೇ ಶರಾವತಿ ಅಭಯಾರಣ್ಯಕ್ಕೆ ಸೇರಿಸಲು ಕಳೆದ ಜೂನ್ 7ರಂದು ಆದೇಶ ಹೊರಡಿಸಿರುವುದು ಸರ್ಕಾರದ ಜನವಿರೋಧಿ ನೀತಿಯಾಗಿದೆ. ಇದರಿಂದ ಅರಣ್ಯ ಅತಿಕ್ರಮಣದಾರರಿಗೆ ಅನ್ಯಾಯ ಮಾಡಿದಂತಾಗಿದೆ. | ಎ. ರವೀಂದ್ರ ನಾಯ್ಕ, ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ

ಶರಾವತಿ ಅಭಯಾರಣ್ಯ ಪ್ರದೇಶವನ್ನು ಹೆಚ್ಚು ಮಾಡಿ ಹೊನ್ನಾವರ ಅರಣ್ಯ ವ್ಯಾಪ್ತಿ ಸೇರಿಸಲು ಈಗಾಗಲೇ ನೋಟಿಫಿಕೇಶನ್ ಆಗಿದೆ. ಶಿರಸಿ, ಸಿದ್ದಾಪುರ ತಾಲೂಕಿನ 9 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ, ಕೆಲ ಹಳ್ಳಿಗಳೂ ಈ ವ್ಯಾಪ್ತಿಯಲ್ಲಿವೆ. ಅರಣ್ಯ ರಕ್ಷಣೆಗೆ ಇಲ್ಲಿ ಒತ್ತು ನೀಡಬೇಕಿದ್ದು, ಸರ್ಕಾರದ ಆದೇಶವನ್ನು ನಾವು ಪಾಲಿಸೇಬೇಕಿದೆ. | ಎಸ್.ಜಿ. ಹೆಗಡೆ, ಉಪಅರಣ್ಯ ಸಂರಕ್ಷಣಾಧಿಕಾರಿ, ಶಿರಸಿ.

ದಟ್ಟವಾದ ಅರಣ್ಯಭೂಮಿ ಹೆಚ್ಚಿರುವ ಆಯ್ದ ಗ್ರಾಮಗಳನ್ನು ಅಭಯಾರಣ್ಯಕ್ಕೆ ಸೇರಿಸುವ ಕುರಿತು ನಮ್ಮ ಇಲಾಖೆಗೆ ಆದೇಶ ಬಂದಿದೆ. ಸಿಂಗಳೀಕ ಮತ್ತು ಇತರ ಪ್ರಾಣಿಗಳ ಸಂರಕ್ಷಣೆಯ ಗುರಿಯನ್ನು ಆದೇಶದಲ್ಲಿ ಪರಿಗಣಿಸಲಾಗಿದ್ದು, ಈ ಅರಣ್ಯ ಭೂಮಿಯಲ್ಲಿ ಉದ್ದಿಮೆ, ಕೈಗಾರಿಕೆ ಹಾಗೂ ಪರಿಸರ ವಿರೋಧಿಯಾಗಿರುವ ಯೋಜನೆಗಳನ್ನು ಸ್ಥಾಪಿಸಬಾರದು ಎಂಬ ಅಂಶಗಳು ಆದೇಶದಲ್ಲಿವೆ. | ಗಣಪತಿ ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ವಿಭಾಗ

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...