ಸಿನಿಮಾ

ಶರಣಬಸವ ಪಬ್ಲಿಕ್ ಸ್ಕೂಲ್‍ಗೆ ಉತ್ತಮ ಫಲಿತಾಂಶ

ಬೀದರ್: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಶರಣಬಸವ ಪಬ್ಲಿಕ್ ಸ್ಕೂಲ್‍ಗೆ ಶೇ 89.28 ರಷ್ಟು ಫಲಿತಾಂಶ ಬಂದಿದೆ.

6 ಅಗ್ರಶ್ರೇಣಿ, 16 ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸಾಕ್ಷಿ ಸಂಜಯಕುಮಾರ ಶೇ 96.64, ಪ್ರೇಕ್ಷಾ ಸುನೀಲಕುಮಾರ ಶೇ 96.32, ದಿಯಾ ಶಂಕರ ರೆಡ್ಡಿ ಶೇ 95.2, ನಮ್ರತಾ ಸಂಜೀವಕುಮಾರ ಶೇ 91.36, ಸುಪ್ರಿಯಾ ಪ್ರಕಾಶ ಶೇ 91.36, ಉದಯ ಸಂತೋಷ ಸ್ವಾಮಿ ಶೇ 89.76 ರಷ್ಟು ಅಂಕ ಗಳಿಸಿ ಸಾಧನೆ ತೋರಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಡಾ. ದಾಕ್ಷಾಯಣಿ ತಾಯಿ, ಚಿರಂಜೀವಿ ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ನಿರ್ದೇಶಕ ಶರಣಪ್ಪ ದೇಶಮುಖ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದಾಗಿ ಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಡಾ. ಸತೀಶ ಪ್ರತಾಪುರ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್