ಶಾಲೆ ಶತಮಾನೋತ್ಸವಕ್ಕಾಗಿ ಮ್ಯಾರಥಾನ್​

ರಾಯಚೂರು : ಜಿಲ್ಲೆಯ ತಾರಾನಾಥ ಶಿಕ್ಷಣ  ಸಂಸ್ಥೆ ಹಾಗೂ ಹಮದರ್ದ್ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಿಕ್ಷಣ ಸಂಸ್ಥೆಯ ಬಾಲಕ, ಬಾಲಕಿಯರಿಂದ ಮ್ಯಾರಥಾನ್​ ಟ ಏರ್ಪಡಿಸಲಾಗಿತ್ತು.

ನಗರದ ಶಿಕ್ಷಣ ಸಂಸ್ಥೆ ಚಾಲಿತ ಎಲ್ ವಿಡಿ ಕಾಲೇಜಿನಿಂದ ಬಾಲಕರ ಹಾಗೂ ಎಸ್ ಎಸ್ ಆರ್ ಜಿ ಮಹಿಳಾ ಮಹಾವಿದ್ಯಾಲಯದಿಂದ ಬಾಲಕಿಯರ ಓಟಕ್ಕೆ ಬುಧವಾರ ಬೆಳಗ್ಗೆ ಸಂಸ್ಥೆ ಪದಾಧಿಕಾರಿಗಳು ಚಾಲನೆ ನೀಡಿದರು.

ಎರಡೂ ಕಾಲೇಜುಗಳಿಂದ ಮ್ಯಾರಥಾನ್ ಒಟದಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳ ಮೂಲಕ ಮೂರು ಕಿಲೋಮೀಟರ್ ದೂರದ ಹಮದರ್ದ್ ಶಾಲೆಗೆ ಬಂದು ತಲುಪಿದರು. ಟ್ರಾಫಿಕ್ ಸಮಸ್ಯೆ ಆಗದಂತೆ ವಿದ್ಯಾರ್ಥಿಗಳ ಮ್ಯಾರಥಾನ್ ಗೆ ವ್ಯವಸ್ಥೆ ಯನ್ನು ಪೊಲೀಸರು ಮಾಡಿದರು.

ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ ಬಾಲಕ, ಬಾಲಕಿಯರಿಗೆ ಸಂಸ್ಥೆಯಿಂದ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ ಚಪ್ಪಾಳೆ ತಟ್ಟಿ ಕಾಲೇಜು ಸಿಬ್ಬಂದಿ ಪ್ರೋತ್ಸಾಹಿಸಿದರು. ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡ ಶತಮಾನೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮ್ಯಾರಥಾನ್ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಸಂಚಾಲಕರು ತಿಳಿಸಿದರು.

Leave a Reply

Your email address will not be published. Required fields are marked *