ಶತಮಾನದ ಮನೆಯಲ್ಲಿ ದೀಪ್​ವೀರ್ ಸಪ್ತಪದಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನ. 14ರಂದು ಬಾಳಬಂಧನಕ್ಕೆ ಒಳಗಾಗಲಿದ್ದಾರೆ. ಇಟಲಿಯ ಪ್ರಸಿದ್ಧ ಲೇಕ್ ಕೊಮೊದ ಪುರಾತನ ಡೆಲ್ ಬಾಲ್ಬಿನೆಲ್ಲೋ ವಿಲ್ಲಾದಲ್ಲಿ ಕೆಲವೇ ಗಣ್ಯರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ. ಹಾಗಾದರೆ, ದೀಪಿಕಾ ಮತ್ತು ರಣವೀರ್ ಇಟಲಿಯ ಲೇಕ್ ಕೊಮೊವನ್ನೇ ಆಯ್ದುಕೊಂಡಿದ್ದೇಕೆ? ಅದಕ್ಕೂ ಕಾರಣವಿದೆ.

ವಾಸ್ತುಶಿಲ್ಪದ ವಿಚಾರವಾಗಿಯೇ ರೋಮ್ ನಗರ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಅಲ್ಲಿನ ಪುರಾತನ ಕಟ್ಟಡಗಳು, ನದಿ ತೀರದ ಮನೆಗಳು ಪ್ರವಾಸಿಗರಿಗೆ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಡೆಲ್ ಬಾಲ್ಬಿನೆಲ್ಲೋ ವಿಲ್ಲಾ ಏಳನೇ ಶತಮಾನದ ರೋಮನ್ ಇತಿಹಾಸವನ್ನೇ ಹೇಳುತ್ತದೆ. ಇದೀಗ ಇದೇ ಪುರಾತನ ಕಟ್ಟಡ ದೀಪ್-ವೀರ್ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ. ಮದುವೆ ಹಿನ್ನೆಲೆಯಲ್ಲಿ ಭಾನುವಾರದಿಂದ ಆ ಕಟ್ಟಡದೊಳಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಕಟ್ಟಡದ ಬಳಿ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ.

ಡೆಲ್ ಬಾಲ್ಬಿನೆಲ್ಲೋ ವಿಲ್ಲಾಕ್ಕೆ ಪ್ರವೇಶವೂ ಅಷ್ಟು ಸುಲಭವಿಲ್ಲ. ಎರಡೂವರೆ ಕಿಲೋ ಮೀಟರ್ ಪರ್ಯಾಯ ದ್ವೀಪದ ಮೂಲಕ ಹಾದು ಹೋಗುವುದೇ ಏಕೈಕ ಮಾರ್ಗ. ಪ್ರವೇಶವಾಗುತ್ತಿದ್ದಂತೆ, ರೋಮನ್ ಶಿಲ್ಪಗಳು ಸ್ವಾಗತ ಕೋರುತ್ತವೆ. ವಿಶಾಲವಾದ ನದಿ, ಹಸಿರು ಗಾರ್ಡನ್, ಮನಸ್ಸಿಗೆ ಮುದ ನೀಡುವ ವಾತಾವರಣ ಲೇಕ್ ಕೊಮೊದಲ್ಲಿರುವ ಡೆಲ್ ಬಾಲ್ಬಿನೆಲ್ಲೋ ವಿಲ್ಲಾದ ವಿಶೇಷ. -ಏಜೆನ್ಸೀಸ್

Leave a Reply

Your email address will not be published. Required fields are marked *