More

  ವಿದ್ಯುತ್ ತಗುಲಿ ವ್ಯಕ್ತಿ ಸಾವು

  ಶಿಗ್ಗಾಂವಿ: ನಿರ್ಮಾಣ ಹಂತದ ಮನೆ ಗೋಡೆಗೆ ನೀರು ಹೊಡೆಯಲು ಹೋದ ವ್ಯಕ್ತಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
  ವೀರಭದ್ರಯ್ಯ ಶಿವಯ್ಯ ಭೂಸನೂರಮಠ (45) ಮೃತ ವ್ಯಕ್ತಿ.
  ಇವರು ನಿರ್ಮಾಣ ಹಂತದ ಮನೆಗೆ ನೀರು ಹೊಡೆಯುವ ಸಲುವಾಗಿ ನೀರಿನ ಮೋಟಾರ್ ಆರಂಭಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts