More

  ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಿ

  ಚಿಕ್ಕಮಗಳೂರು: ಶಿಕ್ಷಕರ ಕ್ಷೇತ್ರದಿಂದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಶಿಕ್ಷಕರಲ್ಲದವರನ್ನು ತಿರಸ್ಕರಿಸಿ ಶಿಕ್ಷಕರನ್ನು ಮಾತ್ರ ಆಯ್ಕೆ ಮಾಡಲು ಶಿಕ್ಷಕರು ಮುಂದಾಗಬೇಕು ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಅರುಣ್ ಹೊಸಕೊಪ್ಪ ಮನವಿ ಮಾಡಿದರು.

  ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂ. ೩ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಿz್ದೆÃನೆ. ಹಿಂದಿನ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿz್ದÉÃನೆ. ಈ ಬಾರಿ ಶಿಕ್ಷಕರು ತಮ್ಮನ್ನು ಗೆಲ್ಲಿಸಿದಲ್ಲಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
  ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಶಿಕ್ಷರ‍್ಗಾ ಕನಿಷ್ಠ ೩ ವರ್ಷ ಸೇವೆ ಸಲ್ಲಿಸಿದ ಅನುಭವ ಇರಬೇಕು. ಆದರೆ ಚುನಾವಣೆಗೆ ಸ್ಪರ್ಧಿಸುವವರಿಗೆ ಒಂದು ದಿನದ ಅನುಭವವೂ ಇರುವುದಿಲ್ಲ. ಈ ಪದ್ಧತಿ ಹೋಗಬೇಕು. ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದ ಅವರು, ತಾವು ಕೂಡ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದು, ತಮ್ಮ ಪರವಾಗಿ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ವಿನಂತಿಸಿದರು.
  ನೈಋತ್ಯ ಶಿಕ್ಷಕರ ಕ್ಷೇತ್ರ ಹಿಂದೆ ಶಿಕ್ಷಕರಾಗಿಯೇ ಬಂದಿದ್ದ ಗಣೇಶ್ ಕಾರ್ಣಿಕ್ ಅವರ ಕಾಲದಲ್ಲಿ ಉತ್ತಮವಾಗಿತ್ತು. ನಂತರ ಆಯ್ಕೆಯಾಗಿ ಬಂದ ಹಾಲಿ ಸದಸ್ಯರ ಅವಧಿಯಲ್ಲಿ ಆಮಿಷ, ಭ್ರಷ್ಟಾಚಾರ, ಜಾತಿ ತಾರತಮ್ಯ ಇತ್ಯಾದಿಗಳಿಂದ ಶಿಕ್ಷಕರ ಕ್ಷೇತ್ರ ಮಲಿನವಾಗಿದೆ. ಇಂತಹ ಕಳಂಕ ಹೋಗಬೇಕಾಗಿದೆ ಎಂದು ಹೇಳಿದರು.
  ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಲು ಇಡೀ ಶಿಕ್ಷಕ ಸಮೂಹ ತೀರ್ಮಾನ ಮಾಡಬೇಕು. ಇಲ್ಲದಿದ್ದಲ್ಲಿ ಕೋಟ್ಯಧಿಪತಿಗಳು, ಗಣಿ-ಧಣಿಗಳು, ಭ್ರಷ್ಟ ವ್ಯಕ್ತಿಗಳು ಆಯ್ಕೆಯಾಗಿ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ. ಅಂತಹವರಿಗೆ ಶಿಕ್ಷಕರ ಸಮಸ್ಯೆಗಳ ಅರಿವು ಇರುವುದಿಲ್ಲ ಎಂದು ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts