More

    ವ್ಯಸನ ಮುಕ್ತ ಜೀವನದಿಂದ ನೆಮ್ಮದಿ

    ಹುಮನಾಬಾದ್: ಮನುಷ್ಯ ಮಾದಕ ವಸ್ತುಗಳ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗದೆ, ವ್ಯಸನಮುಕ್ತ ಜೀವನ ನಡೆಸಿ ಗುರುಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನೆಮ್ಮದಿ ಜೀವನ ಸಾಗಿಸಿ ಎಂದು ತೆಲಂಗಾಣದ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.

    ನಂದಗಾಂವದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸದ ಪ್ರವಚನ ಸಮಾರೋಪದಲ್ಲಿ ಮಾತನಾಡಿ, ಮಾದಕ ವಸ್ತುಗಳ ಚಟಕ್ಕೆ ಬಿದ್ದು ಅನೇಕ ಯುವಕರು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಎಂದರು.

    ಎಲ್ಲರೂ ಕಾಯಕ ಮಾಡಿ ಬದುಕು ಸಾಗಿಸಬೇಕು. ಪರಮಾತ್ಮನನ್ನು ನಿತ್ಯ ಬೆಳಗಿನ ಜಾವ ಪೂಜಿಸಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು. ದಾಸ ಸಾಹಿತ್ಯ ಸೇರಿ ಮಹಾತ್ಮರ ಜೀನವ ಸಾಧನೆ ಪುಸ್ತಕ ಓದಬೇಕು ಎಂದರು.

    ಗ್ರಾಮದ ಹುನುಮಾನ ಮಂದಿರದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ಶ್ರೀ ಜಗನ್ನಾಥ ಸ್ವಾಮಿ ಚೊಂಡಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ನ್ಯಾ.ಸತೀಶ ರಾಂಪುರೆ, ನಂದಕುಮಾರ ಚಾಗೆ, ಗೋವಿಂದ ರಂಜೇರಿ, ಜಗನ್ನಾಥ ಹಣಮಶೆಟ್ಟಿ, ರವಿ ಕೊಡಗೇರಾ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts