ವ್ಯವಸ್ಥಿತ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ

ಬೆಳಗಾವಿ: ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಹಳಿ ತಪ್ಪಿದೆ. 10-12 ದಿನಕೊಮ್ಮೆ ನೀರು ಸರಬರಾಜಾಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆಯಾಗಿದ್ದು, ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಅವರು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.

ವಿಶ್ವೇಶ್ವರಯ್ಯ ನಗರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ಗುರುವಾರ ಎಲ್ ಆ್ಯಂಡ್ ಟಿ ಹಾಗೂ ಮಂಡಳಿ ಅಧಿಕಾರಿಗಳೊಂದಿಗೆ ನಗರದಲ್ಲಿ ಉದ್ಭವಿಸಿರುವ ನೀರು ಸರಬರಾಜು ಸಮಸ್ಯೆ ಕುರಿತು ಅವರು ಸಭೆ ನಡೆಸಿ, ಚರ್ಚಿಸಿದರು. ನಗರದಲ್ಲಿ ನೀರು ಬಿಡುವುದಕ್ಕೆ ಸರಿಯಾದ ಸಮಯ ನಿಗದಿಗೊಳಿಸಿಲ್ಲ. ಯಾವ ಪ್ರದೇಶದಲ್ಲಿ ಎಷ್ಟೊತ್ತಿಗೆ ನೀರು ಬರುತ್ತದೆ ಎಂಬ ಮಾಹಿತಿ ಜನರಿಗಿಲ್ಲ. ಇದರಿಂದ ಗೃಹಣಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ನೀರು ಬಿಡುವುದಕ್ಕೆ ವ್ಯವಸ್ಥಿತ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.

ಎಲ್ ಆ್ಯಂಡ್ ಟಿ ಯೋಜನಾ ವ್ಯವಸ್ಥಾಪಕ ಹಾರ್ದಿಕ್ ದೇಸಾಯಿ ಮಾತನಾಡಿ, ಕೆಲ ಪ್ರದೇಶಗಳಲ್ಲಿ ವಾಲ್ವ್‌ಮನ್‌ಗಳು ಹೊಸಬರಿದ್ದಾರೆ. ಜತೆಗೆ ಹೆಸ್ಕಾಂ ಲೋಡ್ ಶೆಡ್ಡಿಂಗ್‌ನಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ನಗರದಲ್ಲಿ ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಎಲ್ ಆ್ಯಂಡ್ ಟಿ ಕಂಪನಿ ಕೈಗೆತ್ತಿಕೊಂಡಾಗಿನಿಂದ ನಮ್ಮ
ಮುಖ್ಯ ಕಚೇರಿಯಿಂದ ಎಲ್ಲ ಕಾಮಗಾರಿಗೆ ಒಪ್ಪಿಗೆ ತೆಗೆದು ಕೊಳ್ಳುವುದರಲ್ಲೇ ವಿಳಂಬವಾಗುತ್ತಿದೆ. ಹೀಗಾಗಿ ಸ್ವಲ್ಪ ಹಿನ್ನೆಡೆಯಾಗುತ್ತಿದೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಾ ಕುಡಚಿ, ಎಲ್ ಆ್ಯಂಡ್ ಟಿ ಕಂಪನಿಯ ಆಂತರಿಕ ತಾಂತ್ರಿಕ ತೊಡಕುಗಳು ನಮಗೆ ಸಂಬಂಧ ಇಲ್ಲ. ನೀರು ಸರಬರಾಜು ವ್ಯವಸ್ಥೆಯನ್ನು ತಮಗೆ ವಹಿಸಿದ ಬಳಿಕ, ಜನರಿಗೆ ತೊಂದರೆಯಾಗದಂತೆ ನೀರು ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.

ಆಂಜನೇಯ ನಗರ, ಬಸವಕಾಲನಿ ಸೇರಿ ಇತರ ಪ್ರದೇಶಗಳಿಗೆ ನಿರಂತರ ನೀರು ಸರಬರಾಜು ಪ್ರಯೋಗ ಮಾಡಲಾಗುತ್ತಿದೆ. ಈ ಪ್ರದೇಶಗಳಿಗೂ 10-12 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ ಎಂದು ನಿವಾಸಿಗಳು ತೊಂದರೆ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಎಲ್ ಆ್ಯಂಡ್ ಟಿ ಕಂಪನಿಯ ಹಾರ್ದಿಕ್ ದೇಸಾಯಿ, ಕೆಲ ತಾಂತ್ರಿಕ ತೊಂದರೆಗಳು ಎದುರಾಗಿವೆ. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು. ಮಧ್ಯೆ ಪ್ರವೇಶಿಸಿದ ದೀಪಾ ಕುಡಚಿ, ಕೆಲ ಪ್ರದೇಶದಲ್ಲಿ ವಾಲ್ವಮನ್‌ಗಳ ಸ್ವ ಪ್ರತಿಷ್ಠೆ, ಪರ್ಸನಲ್ ಅಜೆಂಡಾ ಇಟ್ಟುಕೊಂಡಿದ್ದಾರೆಂದು ದೂರುಗಳಿವೆ. ಅಂತಹ ಕಡೆಗಳಲ್ಲಿ ವಾಲ್ವಮನ್‌ಗಳನ್ನು ಬದಲಾಯಿಸಿ ಪ್ರಯೋಗ ಮಾಡಬೇಕು. ನೀರಿನ ವಿಷಯ ನಗರದಲ್ಲಿ ಬಹು ಚರ್ಚಿತವಾಗುತ್ತಿದೆ. ನೀರು ಲಭ್ಯವಿದೆ. ಆದರೆ, ಕೊನೆ ಪಕ್ಷ 3-4 ದಿನಕ್ಕೊಮ್ಮೆಯಾದರೂ ನೀರು ಸರಬರಾಜು ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಎಲ್ ಆ್ಯಂಡ್ ಟಿ ನೀರು ಸರಬರಾಜು ವ್ಯವಸ್ಥೆಯ ಡಿಸೈನ್ ಬಿಲ್ಡ್ ಆಪರೇಟ್ ಇಂಜಿನಿಯರ್ ಪಿ.ರಾಮಚಂದ್ರಯ್ಯ, ನಿರ್ವಹಣೆ ವ್ಯವಸ್ಥಾಪಕ ಡಿ.ಬಿ. ಪಾಟೀಲ್, ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತ, ಸಹಾಯಕ ಕಾರ್ಯಪಾಲ ಅಭಿಯಂತ ಶಶಿಕುಮಾರ ಹತ್ತಿ ಹಾಗೂ ಎಲ್ ಆ್ಯಂಡ್ ಟಿ ಅಧಿಕಾರ ಅಲ್ತಾಫ್ ಫಿರಜಾದೆ ಇದ್ದರು.

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…