ವ್ಯಕ್ತಿತ್ವ ವಿಕಾಸನಕ್ಕೆ ಸಂಗೀತ ಸಹಕಾರಿ

ನೆಲಮಂಗಲ: ವ್ಯಕ್ತಿತ್ವ ವಿಕಾಸಕ್ಕೆ ಸಂಗೀತ ಕಾರ್ಯಕ್ರಮ ಪೂರಕ ಎಂದು ಬೆಂಗಳೂರು ಸುಯೋಗ ಸಂಗೀತ ಅಕಾಡೆಮಿ ಅಧ್ಯಕ್ಷ ದೀಪಕ್ ನಾಗಣ್ಣನವರ್ ಅಭಿಪ್ರಾಯಪಟ್ಟರು.

ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಗೀತ ಸಿಂಚನಾ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿತಿಂಗಳು ಸಂಗೀತ ಸಿಂಚನಾ, ಅರಿವಿನ ಅಂಗಳ ಚಿಂತನಾಗೋಷ್ಠಿಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿರುವುದು. ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿರುವ ಮಠದ ಸ್ವಾಮೀಜಿಗಳ ಕಾರ್ಯ ಪ್ರಶಂಸನೀಯ ಎಂದರು.

ಒಳ್ಳೆಯದನ್ನು, ಒಳ್ಳೆಯ ಕೆಲಸ ಮಾಡಿದವರನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಮನಗಂಡಿರುವ ಮಠದಿಂದ ವಿವಿಧ ವೇದಿಕೆಗಳನ್ನು ನಿರ್ಮಿಸುತ್ತಿದ್ದು, ಜನಮಾನಸದಲ್ಲಿ ಸದ್ಭಕ್ತಿ, ಸದ್ಗುಣಗಳನ್ನು ಬೆಳೆಸಲಾಗುತ್ತಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸಂಗೀತ ಸಿಂಚನಾ ಕಾರ್ಯಕ್ರಮ ನಡೆಸಿಕೊಟ್ಟ ಬೆಂಗಳೂರು ಸುಯೋಗ ಸಂಗೀತ ಅಕಾಡೆಮಿ ಗಾಯಕರು ಹಾಗೂ ತಾಲೂಕಿನ ಜ್ಯೋತಿಷಿಗಳು ಮತ್ತು ಆಗಮಿಕರನ್ನು ಮಠದಿಂದ ಸನ್ಮಾನಿಸಿಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ನಿಕಟಪೂರ್ವ ಜಿಲ್ಲಾಧ್ಯಕ್ಷೆ ರಾಜಮ್ಮ ಪ್ರಕಾಶ್, ಉಪಾಧ್ಯಕ್ಷೆ ಪುಷ್ಪಾವತಿ, ಅಕ್ಕನಬಳಗ ಸದಸ್ಯ ಜಗದಾಂಬ, ಪ್ರಾಂಶುಪಾಲ ಎಂ.ಆರ್.ವೀರಪ್ಪಾಜಿ. ಶಿಕ್ಷಕ ಗುರುಮೂರ್ತಿ, ಮುಖಂಡರಾದ ಮುದ್ದುಬಸವಯ್ಯ, ಅಭಿಲಾಷ್, ಬಸವರಾಜು, ಎಂ.ಆರ್.ಲೋಕೇಶ್, ರುದ್ರೇಶಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *