ಚಿತ್ರದುರ್ಗ: ನಗರದ ಶಕ್ತಿದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇಗುಲದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಆ. 16ರಂದು ಲಕ್ಷ್ಮೀ ದೇವಿ ಮಾದರಿಯಲ್ಲಿ ದೇವಿ ಮೂರ್ತಿಗೆ ವಿವಿಧ ಪುಷ್ಪ, ಆಕರ್ಷಕ ವಸ್ತುಗಳಿಂದ ವೈಭವೋಪೇತ ಅಲಂಕಾರ ಸೇವೆ ಜರುಗಲಿದೆ.
ಬೆಳಗ್ಗೆ 11ಕ್ಕೆ ಮೊದಲ ಪೂಜೆ ನೆರವೇರಲಿದ್ದು, ಆನಂತರದಿಂದ ರಾತ್ರಿ 10ರ ವರೆಗೂ ಭಕ್ತರಿಗೆ ದೇವಿಯ ದರ್ಶನ, ಮಹಾಮಂಗಳಾರತಿ, ತೀರ್ಥ, ಪ್ರಸಾದ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.