ಕಲಬುರಗಿ: ಡಾ.ಪಿ.ಎಸ್.ಶಂಕರ ಪ್ರತಿಷ್ಠಾನದಿಂದ 2023-28ರ ಅವಧಿಯ ವಿದ್ಯಾರ್ಥಿ ವೇತನಕ್ಕೆ ವೈದ್ಯ ವಿಜ್ಞಾನ (ಎಂಬಿಬಿಎಸ್) ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕರ್ನಾಟಕದ ಯಾವುದೇ ಭಾಗದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ನರೇಂದ್ರ ಬಡಶೇಷಿ ತಿಳಿಸಿದ್ದಾರೆ.
ಎಂಬಿಬಿಎಸ್ ಶಿಕ್ಷಣದ ನಾಲ್ಕೂವರೆ ವರ್ಷದವರೆಗೆ ಪ್ರತಿ ತಿಂಗಳು 1500 ರೂ. ವಿದ್ಯಾರ್ಥಿ ವೇತನ ನೀಡಲಾಗುವುದು. ಪಿಯುಸಿ ಮತ್ತು ನೀಟ್ ಪರೀಕ್ಷೆ ಅಂಕಪಟ್ಟಿಗಳ ಜಿರಾಕ್ಸ್ ಪ್ರತಿ ಲಗತ್ತಿಸಿರುವ ಅರ್ಜಿಯನ್ನು ಆಯಾ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ಮೂಲಕ ಅಥವಾ ನೇರವಾಗಿ ಪ್ರೊ.ನರೇಂದ್ರ ಬಡಶೇಷಿ, ಕಾರ್ಯದರ್ಶಿ, ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ, ಮನೆ ನಂ.1-11-21ಇ, ಖೂಬಾ ಪ್ಲಾಟ್, ಕಲಬುರಗಿ-585102 ವಿಳಾಸಕ್ಕೆ ಸಲ್ಲಿಸಬಹುದು. ವೆಬ್‌ಸೈಟ್ www.psshankarprathisthan.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿ ಸೆ.30ರೊಳಗೆ ಸಲ್ಲಿಸತಕ್ಕದ್ದು.
ಗ್ರಾಮೀಣ ಮತ್ತು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ಮಾಹಿತಿಗೆ ಮೊ. 94488 13514/ 94801 49723ಗೆ ಸಂಪರ್ಕಿಸಬಹುದು.