ವೇಮಗಲ್​ ಶಾಲೆಗೆ ಹಿಂದಿ ಶಿಕ್ಷಕ ನೇಮಕ

blank

ಡಿಡಿಪಿಐ ಕೃಷ್ಣಮೂರ್ತಿ ಭೇಟಿ, ಪರಿಶೀಲನೆ

 ವೇಮಗಲ್​ : ಇಲ್ಲಿನ ಸರ್ಕಾರಿ ಪ್ರೌಢ ಶಾಲೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.
ಶಾಲೆಯಲ್ಲಿ ಶಿಕ್ಷಕರ, ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳ ಕೊರತೆ ಕುರಿತು ವಿಜಯವಾಣಿಯಲ್ಲಿ ಅ.29ರಂದು ವಿಷಯವಾರು ಶಿಕ್ಷಕರಿಲ್ಲದೆ ತೊಂದರೆ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಶಾಲೆಗೆ ಭೇಟಿ ನೀಡಿದ ಕೃಷ್ಣಮೂರ್ತಿ ಅವರು, ಸಮಸ್ಯೆಗಳ ಬಗ್ಗೆ ಉಪ ಪ್ರಾಂಶುಪಾಲೆ ಸುಮಾ ಅವರಿಂದ ಮಾಹಿತಿ ಸಂಗ್ರಹಿಸಿದರು. ಸಮಸ್ಯೆಗೆ ಸ್ಪಂದಿಸಿದ ಕೃಷ್ಣಮೂರ್ತಿ, ಬೆತಮಂಗಲ, ಸುಂದರಪಾಳ್ಯದ ಕ್ಲಸ್ಟರ್​ ಸಿಆರ್​ಪಿ ಸೂರಪ್ಪ ಅವರಿಗೆ ದೂರವಾಣಿ ಕಡೆ ಮಾಡಿ ಮಂಗಳವಾರದಿಂದಲೇ ವೇಮಗಲ್​ ಶಾಲೆಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಈ ಕೂಡಲೇ ನಿಮ್ಮನ್ನು ವೇಮಗಲ್​ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದಲ್ಲಿ ಹಿಂದಿ ಶಿಕ್ಷಕ ಕೊರತೆಯಿದೆ. ಇದರಿಂದಾಗಿ ಮಕ್ಕಳ ಪ್ರಗತಿಯ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಪಾಲಕರಿಂದಲೂ ದೂರುಗಳು ಬಂದಿದ್ದು, ಸ್ಪಂದಿಸಬೇಕು ಎಂದು ಸಲಹೆ ನಿಡಿದ ಅವರು, ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು ಮಂಗಳವಾರ ಬಂದು ಪಾಠ ಮಾಡಬೇಕು ಎಂದು ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ, ಡಿ ಗ್ರೂಪ್​ ನೌಕರರು ಮತ್ತು ಎಸ್​ಡಿಎ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಷಯ ಪರಿವಿಕ್ಷಕ ಶಂಕರೇಗೌಡ, ಉಪ ಪ್ರಾಂಶುಪಾಲೆ ಸುಮಾ, ಎಸ್​ಡಿಎಂಸಿ ಅಧ್ಯಕ್ಷ ನಾಗರಾಜ್​, ಶಿಕ್ಷಕರಾದ ಮುನಿರಾಜ್​, ರಮೇಶ್​, ಆನಂದ್​, ಚನ್ನಪ್ಪನಹಳ್ಳಿ ಮುಖಂಡ ನಾಗರಾಜ್​ ಹಾಜರಿದ್ದರು.

 

TAGGED:
Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…