ವೇದ-ಆಗಮ ಜ್ಞಾನಮೂಲ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವೇದ, ಆಗಮಗಳು ಜ್ಞಾನದ ಮೂಲವಾಗಿವೆ. ವೇದವನ್ನು ಭಗವದ್ಗೀತೆ ಮೂಲಕ ಕೃಷ್ಣ ಸಾರಿದರೆ, ಆಗಮಕ್ಕೆ ಗೀತರೂಪ ಕೊಟ್ಟು ಜಗದ್ಗುರು ಶ್ರೀರೇಣುಕ ಭಗವತ್ಪಾದರು ನಮ್ಮ ಕಿವಿಗಳಿಗೆ ತಲುಪಿಸಿ ಇಂಪಾಗಿಸಿದ್ದಾರೆ ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿಶ್ಲೇಷಿಸಿದ್ದಾರೆ.

ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗಾನಸುಧೆ ಭಜನಾ ಮಂಡಳಿಯ ತೃತೀಯ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತನ್ನು ಸೃಷ್ಟಿ ಮಾಡಿದ ಮೇಲೆ ಸಮಸ್ತ ಮಾನವರಿಗೆ ಜ್ಞಾನ, ಬದುಕುವ ಮಾರ್ಗ ತೋರಲು ಪರಮಾತ್ಮತನ್ನ ಜ್ಞಾನಸಂಪತ್ತನ್ನು ವೇದ, ಆಗಮನದ ಮೂಲಕ ದಯಪಾಲಿಸಿದ್ದಾನೆ. ಅವುಗಳನ್ನು ಸಂಗೀತವಾಗಿ ಮಾಡಿ ಜನರಿಗೆ ಇಬ್ಬರು ದೈವರೂಪದಲ್ಲಿ ತಲುಪಿಸಿದ್ದಾರೆ. ಕೃಷ್ಣ ಹೇಳಿದ ವೇದವು ಭಗವದ್ಗೀತೆಯಾಗಿ ಆಧ್ಯಾತ್ಮ ಪರಂಪರೆಯನ್ನು ಕಟ್ಟಿಕೊಟ್ಟರೆ, ಪರಮಾತ್ಮ ನೀಡಿದ ಆಗಮಗಳಿಗೆ ಗೀತೆ ರೂಪಕೊಟ್ಟವರು ಜಗದ್ಗುರು ಶ್ರೀರೇಣುಕ ಭಗವತ್ಪಾದರು ಎಂದು ವಿವರಿಸಿದರು.ಶಿವಶಂಕರ ಶಾಸ್ತ್ರಿಗಳ ಗಾನಸುಧೆ ಭಜನಾ ಮಂಡಳಿ ಅಂತಹ ಕಾರ್ಯ ಮಾಡುತ್ತಿದ್ದು, ಕಾಶಿಯಲ್ಲಿಯೂ

ಅವರನ್ನು ಕರೆಯಿಸಿ ಕಾರ್ಯಕ್ರಮವನ್ನು ಆಯೋಜಿಸ ಲಾಗುವುದು ಎಂದು ಘೊಷಿಸಿದರು.

ಧಾರ್ವಿುಕತೆ, ವಿಜ್ಞಾನ ಎರಡೂ ಬೇಕು: ಸಮಾಜದಲ್ಲಿ ಆಸ್ತಿಕ- ನಾಸ್ತಿಕ ವರ್ಗದ ಜನರಿದ್ದು, ಆಸ್ತಿಕರು ಸನ್ಮಾರ್ಗದಲ್ಲಿ ನಡೆದರೆ ನಾಸ್ತಿಕರು ಹಣಬಲ, ತೋಳ್ಬಲದಲ್ಲಿ ನಂಬಿಕೆ

ಇಟ್ಟಿದ್ದಾರೆ. ಮನುಷ್ಯರಿಗೆ ಧಾರ್ವಿುಕತೆ, ವಿಜ್ಞಾನ ಎರಡೂ ಬೇಕು ಎಂದು ಗಾನಸುಧೆ ಗೌರವ ಸಲಹೆಗಾರ ವಿದ್ವಾನ್ ಚೆನ್ನಬಸವಾರಾಧ್ಯ ಹೇಳಿದರು.

ಗಾನಸುಧೆ ಭಜನಾ ಮಂಡಳಿಯಿಂದ ಹೊರತಂದಿರುವ ಗಾನಗಂಗೆ ಧ್ವನಿಸಾಂದ್ರಿಕೆಯ ಬಿಡುಗಡೆಗೊಳಿಸಲಾಯಿತು. ಮೌನತಪಸ್ವಿ ಶ್ರೀಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಗದ್ದಿಗೆಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ಮೇಯರ್

ಗಂಗಾಂಬಿಕೆ ಮಲ್ಲಿಕಾರ್ಜುನ್, ಹಿರಿಯ ನಟ ದೊಡ್ಡಣ್ಣ, ಗಾನಸುಧೆ ಅಧ್ಯಕ್ಷ ನಾದಭಾಸ್ಕರ ಶಿವಶಂಕರ ಶಾಸ್ತ್ರಿ, ಹಿರಿಯ ನಟಿ ಹೇಮಾ ಚೌಧರಿ, ಗಾಯಕರಾದ ಕಸ್ತೂರಿ ಶಂಕರ್,

ಶಮಿತಾ ಮಲ್ನಾಡ್, ಹೇಮಂತ್ ಸುಬ್ರಹ್ಮಣ್ಯ, ರಂಗಕರ್ವಿು ಕೆ.ವಿ. ನಾಗರಾಜಮೂರ್ತಿ ಮತ್ತಿತರರಿದ್ದರು.

ಹುಕ್ಕೇರಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನ

ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗೆ ‘ಗುರುಕುಲಶಿರೋಮಣಿ’ ಪ್ರಶಸ್ತಿ

ಪ್ರದಾನ ಮಾತಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗಾನಸುಧೆ ಭಜನಾ ಮಂಡಳಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭಜನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ದಿನವಿಡೀ ಕಾರ್ಯಕ್ರಮ

ಗಾನಸುಧೆ ಭಜನಾಮಂಡಳಿಯ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ದಿನವಿಡೀ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಗೀತ, ಕಿರುನಾಟಕದ ಮೂಲಕ ಕಲಾವಿದರು ಸಭಿಕರನ್ನು ರಂಜಿಸಿದರು. ಸಾಧಕರಿಗೆ ನಾದಸಿರಿ, ವೈದಿಕ ಶಿರೋಮಣಿ, ಜ್ಯೋತಿಷ ಶಿರೋಮಣಿ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಯಿತು.