ವೇದಾವತಿ ನದಿ ಉಳಿವಿಗಾಗಿ ಶ್ರೀ ಮುರುಘಾ ಶರಣರ ಸಾನ್ನಿಧ್ಯದಲ್ಲಿ ರೈತರ ಸಭೆ

ಚಿತ್ರದುರ್ಗ: ಚಿಕ್ಕಮಗಳೂರಲ್ಲಿ ಉಗಮವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಹರಿಯುವ ವೇದಾವತಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀ ಮುರುಘಾ ಶರಣರ ಸಾನ್ನಿಧ್ಯದಲ್ಲಿ ಬುಧವಾರ ಶ್ರೀ ‌ಮಠದಲ್ಲಿ ಅವಳಿ ಜಿಲ್ಲೆಗಳ ರೈತರು , ಪರಿಸರವಾದಿಗಳ ಸಮಾಲೋಚನೆ ಸಭೆ ನಡೆಯಿತು.

ಇಂದು ನದಿ ತಟದ ಸಂಸ್ಕೃತಿಗಳು ಆರ್ಥಿಕತೆ , ಜನರ ಬದುಕು ಬವಣೆಯತ್ತ ಸಾಗಿದೆ. ನದಿ, ನದಿ ಪಾತ್ರವನ್ನು ಕಾಪಾಡಿಕೊಳ್ಳದಿದ್ದರೆ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಈ ಹಿನ್ನಲೆಯಲ್ಲಿ ಶರಣರ ನೇತೃತ್ವದಲ್ಲಿ ಮೇ 10ರಂದು ನದಿ ಪಾತ್ರದ ಆಯ್ದ ಸ್ಥಳಗಳಿಗೆ ಭೇಟಿ ನೀಡಲು ಸಭೆ ತೀರ್ಮಾನಿಸಿತು.

ಈಗಾಗಲೇ ಒಂದು ಬಾರಿ ರೈತರು ಏಪ್ರಿಲ್​ 10 ರಂದು ನದಿ ತಟದಲ್ಲಿ ಸಂಚರಿಸಿ‌ ಮಾಹಿತಿ ಸಂಗ್ರಹಿಸಿರುವುದಾಗಿ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಹೇಳಿದರು. ಪರಿಸರವಾದಿ ಡಾ.ಗಿರೀಶ್ ಇದ್ದರು.

Leave a Reply

Your email address will not be published. Required fields are marked *