ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

ಯಲಹಂಕ: ಐದು ಸಾವಿರ ವರ್ಷಗಳ ಧಾರ್ವಿುಕ ಪರಂಪರೆಯುಳ್ಳ ಜನಮೇಜಯ ರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿತೆಂದು ಪ್ರತೀತಿ ಇರುವ, 30 ದಿನ ನಿರಂತರವಾಗಿ ನಡೆಯುವ ಧಾರ್ವಿುಕ ಉತ್ಸವ ಎಂದು ಖ್ಯಾತಿ ಹೊಂದಿರುವ ಸಂತಾನ ವೇಣುಗೊಪಾಲಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ (ಏ.19) ನಡೆಯಿತು. ರಥೋತ್ಸವಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ಚಾಲನೆ ನೀಡಿದರು.

ಬೆಳಗ್ಗೆಯಿಂದ ಸ್ವಾಮಿಗೆ ಅಭಿಷೇಕ, ಅರ್ಚನೆ, ಪೂರ್ಣಾಹುತಿ, ಮಹಾ ಮಂಗಳಾರತಿ, ಚಕ್ರತಲವಾರ ಪೂಜೆಗಳೊಂದಿಗೆ ಅಭಿಜಿನ್ ಮುಹೂರ್ತದಲ್ಲಿ ಸಾವಿರಾರು ಭಕ್ತರ ಜೈಕಾರ ಘೊಷಣೆಗಳೊಂದಿಗೆ ರಥವನ್ನು ಎಳೆಯಲಾಯಿತು.

ಬೆಂಗಳೂರು ನಗರ ಸೇರಿ, ಸುತ್ತಮುತ್ತಲ ಗ್ರಾಮ ಮತ್ತು ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು. ಅನೇಕ ಸಂಘ ಸಂಸ್ಥೆಗಳು ಅರವಂಟಿಕೆಗಳನ್ನು ಸ್ಥಾಪಿಸಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಿದವು.

Leave a Reply

Your email address will not be published. Required fields are marked *