ವೆಂಕಟಾಪುರ ನದಿಯಲ್ಲಿ ಮೊಸಳೆ ಪ್ರತ್ಯಕ್ಷ !

blank

ವಿಜಯವಾಣಿ ಸುದ್ದಿಜಾಲ ಭಟ್ಕಳ

ಇಲ್ಲಿನ ವೆಂಕಟಾಪುರ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಸ್ಥಳೀಯರ ಹಾಗೂ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ವೆಂಕಟಾಪುರ ತಾಲೂಕಿನ ಹೆಗ್ಗಲು ಬಳಿಯ ನದಿ ಮಧ್ಯದಲ್ಲಿ ಮರಳಿನ ದಿಬ್ಬದ ಮೇಲೆ ಮೊಸಳೆ ಸ್ಥಳೀಯರಿಗೆ ಕಾಣಿಸಿದೆ.

ಇಲ್ಲಿನ ನಾಡದೋಣಿ ಮೀನುಗಾರರು, ಬಲೆಯಿಂದ ಮೀನು ಹಿಡಿಯುವವರು ಮೀನುಗಾರಿಕೆಗೆ ಇದೇ ಪ್ರದೇಶಕ್ಕೆ ತೆರಳುತ್ತಾರೆ. ಆದರೆ, ಮೊಸಳೆ ಕಾಣಿಸಿರುವುದರಿಂದ ಭಯಭೀತರಾಗಿದ್ದಾರೆ. ಕಳೆದ ವರ್ಷ ಇದೇ ವೇಳೆ ಇಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರೂ ಅದು ಸಿಕ್ಕಿರಲಿಲ್ಲ. ಪ್ರವಾಹದ ವೇಳೆ ಮೊಸಳೆ ಇಲ್ಲಿ ಬಂದು ಸೇರಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಇದು ಕಳೆದ ವರ್ಷ ಕಾಣಿಸಿಕೊಂಡಿದ್ದ ಮೊಸಳೆಯೋ ಅಥವಾ ಬೇರೆಯದೋ ಎಂಬುದು ತಿಳಿದುಬಂದಿಲ್ಲ.

ವೆಂಕಟಾಪುರ ನದಿಯ ಹೆಗ್ಗಲು ಬಳಿ ಮರಳಿನ ದಿಬ್ಬದ ಮೇಲೆ ಮೊಸಳೆ ಕಂಡು ಬಂದಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೆರಡು ದಿನ ಆ ಪ್ರದೇಶದ ಮೇಲೆ ತೀವ್ರ ನಿಗಾ ಇಡಲಾಗುವುದು. ಅಂಕೋಲಾದಿಂದ ಮೊಸಳೆ ಹಿಡಿಯುವ ತಜ್ಞರನ್ನು ಕರೆಸಿ ಅದನ್ನು ಸುರಕ್ಷಿತ ತಾಣಕ್ಕೆ ಸೇರಿಸಲು ಪ್ರಯತ್ನ ನಡೆಸಲಾಗುವುದು.
ಶರತ್ ಶೆಟ್ಟಿಆರ್​ಎಫ್​ಒ, ಭಟ್ಕಳ

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…