ವೃದ್ಧಾಪ್ಯ, ವಿಧವಾ ವೇತನ, ಆಧಾರ್, ಪಡಿತರ ಕಾರ್ಡ್ ಕೊಡಿಸುವ ನೆಪದಲ್ಲಿ ವೃದ್ಧೆಯರಿಗೆ ಯಾಮಾರಿಸಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹುರುಳಿಚಿಕ್ಕನಹಳ್ಳಿ ನಿವಾಸಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜ (37) ಬಂಧಿತ. 8.55 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದು, 14 ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಕ್ಷರಸ್ಥ ಮಹಿಳೆಯರನ್ನು ಗುರುತಿಸಿ ವೃದ್ಧಾಪ್ಯ ವೇತನ, ವಿಧವಾ ವೇತನ, ಆಧಾರ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದ. ಆನಂತರ ಒಂದೇಡೆ ಕರೆದೊಯ್ದು ೆಟೋ ತೆಗೆಸಿಬೇಕಾಗಿದೆ. ಮೈ ಮೇಲಿನ ಚಿನ್ನಾಭರಣ ಪೋಟೋದಲ್ಲಿ ಕಂಡರೇ ಸರ್ಕಾರದಿಂದ ಸೌಲಭ್ಯ ಸಿಗುವುದಿಲ್ಲ. ಅದನ್ನು ಬಿಚ್ಚಿ ಕೊಟ್ಟು ಪೋಟೋ ತೆಗೆಸುವಂತೆ ಹೇಳಿ ಚಿನ್ನಾಭರಣ ಪಡೆಯುತ್ತಿದ್ದ. ಅಮಾಯಕ ಮಹಿಳೆಯರು ಪೋಟೋ ಸ್ಟುಡಿಯೋ ಒಳಗೆ ಹೋಗುತ್ತಿದಂತೆ ಆಭರಣದೊಂದಿಗೆ ಪರಾರಿಯಾಗುತ್ತಿದ್ದ. ಬೆಂಗಳೂರು, ಹಾಸನ, ಮಂಗಳೂರು ಸೇರಿದಂತೆ ವಿವಿಧೆಡೆ 9 ಗಮನಬೇರೆಡೆ ಸೆಳೆದು ವಂಚನೆ ಮಾಡಿದ್ದ. ಜತೆಗೆ ಮನೆ ಕಳ್ಳತನ ಸಹ ಎಸಗಿದ್ದ. ಇತ್ತೀಚೆಗೆ ಹೆಸರುಘಟ್ಟ ಸಮೀಪದ ಗೀತಾ ಎಂಬುವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡು ಹೆಸರುಘಟ್ಟ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧಾಪ್ಯ, ವಿಧವಾ ವೇತನ, ಆಧಾರ್, ಪಡಿತರ ಕೊಡಿಸುವ ನೆಪದಲ್ಲಿ ವೃದ್ಧೆಯರಿಗೆ ಯಾಮಾರಿಸುತ್ತಿದ್ದ ಆರೋಪಿ ಅಂದರ್
ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain
ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…
ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!
ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…
Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!
ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…