25.7 C
Bangalore
Sunday, December 15, 2019

ವೀಳ್ಯದೆಲೆ ತೋಟಕ್ಕೆ ರೋಗಬಾಧೆ

Latest News

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

ಮೊಬೈಲ್ ಹಾಳು ಮಾಡಿದ್ದಕ್ಕೆ ಸೋದರ ಮಾವನೇ ಬಾಲಕಿಗೆ ಚಾಕು ಇರಿದು ಹತ್ಯೆ

ಶಿವಮೊಗ್ಗ: ಮೊಬೈಲ್ ವಿಚಾರದಲ್ಲಿ ಭಾನುವಾರ ಸೋದರ ಮಾವನೇ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.5 ವರ್ಷದ ರಂಜನಿ ಹತ್ಯೆಯಾದ...

ಮಸ್ಕಿ ಕ್ಷೇತ್ರಕ್ಕೆ ಇನ್ನೆರಡು ತಿಂಗಳಲ್ಲಿ ಉಪಚುನಾವಣೆ ಸಾಧ್ಯತೆ – ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ಮಸ್ಕಿ: ಬಿಜೆಪಿ ಸೇರಿದ ಮೇಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ಈಗಾಗಲೇ 50 ಕೋಟಿ ರೂ....

ಲಕ್ಷ್ಮೇಶ್ವರ: ಸತತವಾಗಿ ಸುರಿದ ಮಳೆಗೆ ತೋಟಗಾರಿಕೆ ಬೆಳೆ ವೀಳ್ಯದೆಲೆಗೂ ಕುತ್ತು ಬಂದಿದ್ದು ಬೆಳೆಗಾರರು ಹೌಹಾರಿದ್ದಾರೆ.

ತಾಲೂಕಿನಾದ್ಯಂತ ಲಕ್ಷ್ಮೇಶ್ವರ, ಹರದಗಟ್ಟಿ, ಒಡೆಯರ ಮಲ್ಲಾಪುರ, ಉಳ್ಳಟ್ಟಿ, ಅಲಗಿಲವಾಡ ಸೇರಿ 55 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ವೀಳ್ಯದೆಲೆ ಬೆಳೆಯಲಾಗಿದೆ. ತೇವಾಂಶ ಮತ್ತು ಹವಾಮಾನ ವೈಪರೀತ್ಯದಿಂದ ಈಗ ಎಲೆ ಬಳ್ಳಿಗಳ ಎಲೆ ಉದುರುವಿಕೆ, ಸೊರಗು ರೋಗ, ಬಾಡು ರೋಗ, ಬೇರು ಕೊಳೆರೋಗ, ತುಕ್ಕು ರೋಗ, ಎಲೆ ಚುಕ್ಕಿ ರೋಗ, ಬೂದುರೋಗಗಳಿಗೆ ತುತ್ತಾಗಿ ತೋಟಗಳೆಲ್ಲ ಒಣಗಿದಂತಾಗುತ್ತಿವೆ.

ಒಂದು ಬಾರಿ ಎಲೆಬಳ್ಳಿ ಬೆಳೆಸಿದರೆ ಕನಿಷ್ಠ 15-20 ವರ್ಷ ಫಲ ನೀಡುತ್ತದೆ. ನಿತ್ಯವೂ ತೋಟದಲ್ಲಿ ಬಳ್ಳಿ ಕಟ್ಟುವುದು, ನೀರು ಹಾಯಿಸುವುದು, ಕಳೆ ತೆಗೆಯುವುದು, ತಪ್ಪಲು ಸ್ವಚ್ಛಗೊಳಿಸುವುದು ಹೀಗೆ ನಿತ್ಯವೂ ಮಕ್ಕಳಂತೆ ಜೋಪಾನ ಮಾಡಿ ಬೆಳೆಸಿದ ಎಲೆ ಬಳ್ಳಿಗಳು ಹಾಗೂ ಬಳ್ಳಿ ಬೆಳೆಯಲು ಆಸರೆಯಾಗಿರುವ ನುಗ್ಗಿ, ಬೋರಲಾ, ಚೊಗಚಿ, ಮರೌಡ್ಲ ಗಿಡಗಳು ಈಗ ಒಣಗುತ್ತಿರುವುದು ಬೆಳೆಗಾರರು ಕಣ್ಣೀರಾಗುವಂತೆ ಮಾಡಿದೆ. ಒಂದು ಸಾರಿ ಎಲೆಬಳ್ಳಿ ಹಾನಿಗೀಡಾದರೆ ಮತ್ತೆ ಅದನ್ನು ಬೆಳೆಸಿ ಫಲ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದ್ದರಿಂದ ಎಲೆ ತೋಟಗಳನ್ನೇ ನಂಬಿದ್ದ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರು ಶನಿವಾರ ಪಟ್ಟಣದ ಸವಣೂರ ರಸ್ತೆಯಲ್ಲಿರುವ ವೀಳ್ಯದೆಲೆ ಬೆಳೆಗಾರರಾದ ಸೋಮನಗೌಡ ಪಾಟೀಲ, ನಿಂಗನಗೌಡ ಪಾಟೀಲ, ತಿಪ್ಪನಗೌಡ ಪಾಟೀಲ, ರುದ್ರಗೌಡ ಪಾಟೀಲ ಅವರ ತೋಟಕ್ಕೆ ಭೇಟಿ ನೀಡಿದ ಬೆಳೆ ಪರಿಶೀಲಿಸಿದರು. ಬಳಿಕ ಮಾಹಿತಿ ನೀಡಿದ ಅವರು, ಸತತವಾಗಿ ಮಳೆ ಸುರಿದಿದ್ದರಿಂದ ಭೂಮಿಯಲ್ಲಿ ತೇವಾಂಶದ ಹೆಚ್ಚಿ ಎಲ್ಲೆ ಬಳ್ಳಿಯ ಬೇರು ಮತ್ತು ಕಾಂಡಗಳು ಕೊಳೆಯುತ್ತಿವೆ. ನೀರು ಬಸಿದು ಹೋಗುವಂತಹ ಜಮೀನಿನಲ್ಲಿ ವೀಳ್ಯದೆಲೆ ಬಳ್ಳಿ ಬೆಳೆದರೆ ಉತ್ತಮ. ಸಾವಯವ ಮತ್ತು ಅಣುಜೀವಿ ಗೊಬ್ಬರಗಳನ್ನು ಬಳಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ರೈತರಾದ ಮಲ್ಲನಗೌಡ ಪಾಟೀಲ, ಶಿವನಗೌಡ ಪಾಟೀಲ ಅವರು, ‘ಪಕ್ಕದ ಹಾವೇರಿ ಜಿಲ್ಲೆಯ ವೀಳ್ಯದೆಲೆ ಬೆಳೆಗಾರರಿಗೆ ಬೆಳೆ ಹಾನಿ ಪರಿಹಾರ, ಬೆಳೆ ಪುನರ್ಜೀವನ ಪ್ರೋತ್ಸಾಹಧನ ನೀಡುತ್ತಾರೆ ಆದರೆ, ನಮ್ಮಲ್ಲಿ ಏಕೆ ನೀಡುವುದಿಲ್ಲ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಾಯಕ ನಿರ್ದೇಶಕರು ಈ ಭಾಗವನ್ನು ವಿಶೇಷವಾಗಿ ವೀಳ್ಯದೆಲೆ ಬೆಳೆ ಕ್ಷೇತ್ರವೆಂದು ಗುರುತಿಸಲಾಗಿದೆ. ಈ ಭಾಗದಲ್ಲಿನ ವೀಳ್ಯದೆಲೆ ಬೆಳೆಗಾರರಿಗೂ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ರೋಗ ನಿಯಂತ್ರಣಕ್ಕೆ ಹೀಗೆ ಮಾಡಿ ಪ್ರತಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ, 20 ಕೆಜಿ ಸಾರಜನಕ, 20 ಕೆಜಿ ಪೋಟ್ಯಾಷ್, 5 ಕ್ವಿಂಟಾಲ್ ಬೇವಿನಗೊಬ್ಬರ, 5 ಕೆಜಿ ಜಿಂಕ್ ಸಲ್ಪೇಟ್, 5 ಕೆಜಿ ಮ್ಯಾಗ್ನೇಶಿಯಂ ಸಲ್ಪೇಟ್, 3 ಕೆಜಿ ಬೋರಾನ್ ಎಲ್ಲವನ್ನೂ ಸೇರಿಸಿ ವರ್ಷದಲ್ಲಿ 4 ಬಾರಿ ಕೊಡಬೇಕು. ಸದ್ಯ ಎಲೆ ಉದುರುವುದು, ಬಾಡುರೋಗ, ಎಲೆಚುಕ್ಕಿ ಮತ್ತು ಕೊಳೆರೋಗ ನಿಯಂತ್ರಣಕ್ಕಾಗಿ 1 ಕೆಜಿ ಮೈಲುತುತ್ತೆ, 10 ಕೆಜಿ ಸುಣ್ಣವನ್ನು 98 ಲೀಟರ್ ನೀರಿನಲ್ಲಿ ಬೆರೆಸಿ ಬಳ್ಳಿಯ ಸುತ್ತಲಿನ ಮಣ್ಣನ್ನು ತೋಯಿಸಬೇಕು. ಬೂದುರೋಗಕ್ಕೆ ನೀರಿನಲ್ಲಿ ಕರಗುವ 3 ಗ್ರಾಂ ಗಂಧಕವನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕಳೆದ ಅನೇಕ ವರ್ಷಗಳಿಂದ ಎಲೆಬಳ್ಳಿ ತೋಟವೇ ಜೀವನಕ್ಕೆ ಆಧಾರವಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೋಟ ಒಣಗಿ ಬೆಳೆ ಕೈಕೊಡುತ್ತದೆ. ಆದರೆ ಈ ವರ್ಷ ವಿಪರೀತ ಮಳೆಯಾಗಿ ಬೆಳೆ ಕೊಳೆಯುತ್ತಿರುವುದು ನಮ್ಮ ದುರದೃಷ್ಟವಾಗಿದೆ. ಸದ್ಯ ಚಳಿಗಾಲದಲ್ಲಿ ವೀಳ್ಯದೆಲೆಗೆ ಭಾರಿ ಬೇಡಿಕೆ ಇರುತ್ತದೆ ಆದರೆ ಬೆಳೆ ಬರದಂತಾಗಿದೆ. ಕಲ್ಪವೃಕ್ಷದಂತಹ ಬೆಳೆಯಾಗಿದ್ದರಿಂದ ಬೆಳೆ ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ.
| ಸೋಮನಗೌಡ ಪಾಟೀಲ ವೀಳ್ಯದೆಲೆ ಬೆಳೆಗಾರ ಲಕ್ಷೆ್ಮೕಶ್ವರ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...