More

  ವೀರ ಸಾವರ್ಕರ್ ಯುವ ಬಳಗದಿಂದ ಪ್ರತಿಭಟನೆ

  ಮೈಸೂರು: ಕಾಂಗ್ರೆಸ್ ಸೇವಾದಳ ಇತ್ತೀಚೆಗೆ ಹೊರ ತಂದಿರುವ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಉಲ್ಲೇಖ ಮಾಡಲಾಗಿದೆ ಎಂದು ಆರೋಪಿಸಿ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.
  ಅಗ್ರಹಾರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ರಾಹುಲ್ ಗಾಂಧಿ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಉಲ್ಲೇಖ ಮಾಡಲಾಗಿರುವ ಪುಸ್ತಕವನ್ನು ನಿಷೇಧಿಸಬೇಕು. ಕಾಂಗ್ರೆಸ್ ನಾಯಕರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
  ಬಳಗದ ಅಧ್ಯಕ್ಷ ರಾಕೇಶ್ ಭಟ್, ಪದಾಧಿಕಾರಿಗಳಾದ ವಿಕ್ರಂ ಅಯ್ಯಂಗಾರ್, ಸಂಜಯ್, ಸಂದೇಶ್, ಪ್ರಮೋದ್ ಗೌಡ, ಜೀವನ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts