More

  ವೀರ ಯೋಧರ ಸ್ಫೂರ್ತಿಯಲ್ಲಿ..

  ಬೆಂಗಳೂರು: ಈ ಹಿಂದೆ ಕನ್ನಡದ ಜನಪ್ರಿಯ ನಟಿಯರ ಫೋಟೋಗಳನ್ನು ಇಟ್ಟುಕೊಂಡು ಸೀರೆ ಡಿಸೈನ್ ಮಾಡಿದ್ದ ಲಕ್ಷ್ಮೀ ಕೃಷ್ಣ, ಈಗ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವೀರ ಯೋಧರ ಭಾವಚಿತ್ರಗಳುಳ್ಳ ಲಾಂಗ್ ಕೋಟ್ ಮಾಡಿದ್ದಾರೆ.

  ಸಾಮಾನ್ಯವಾಗಿ ಯೋಧರು ಧರಿಸುವಂತಹ ಈ ಕೋಟ್​ನಲ್ಲಿ 19 ವೀರ ಯೋಧರ ಭಾವಚಿತ್ರಗಳ ಜತೆಗೆ, ‘ನನ್ನ ರಕ್ತದ ಕೊನೆಯ ಹನಿ, ನನ್ನ ಜೀವನದ ಕೊನೆಯ ಉಸಿರು, ನಮ್ಮ ತಾಯಿ ಭಾರತಾಂಬೆಗೆ …’ ಎಂದು ಬರೆಯಲಾಗಿದೆ. ಈ ಮೂಲಕ ಯೋಧರಿಗೆ ಗೌರವ ಸಲ್ಲಿಸಲಾಗಿದೆ.

  ಇದನ್ನೂ ಓದಿ: ಸ್ವಾತಂತ್ರ್ಯೊತ್ಸವಕ್ಕೆ ಕರೊನಾ ಕರಿನೆರಳು

  ಈ ಕೋಟ್ ರೂಪಿಸುವುದಕ್ಕೂ ಒಂದು ಕಾರಣವಿದೆ. ಪ್ರಮುಖವಾಗಿ ವೀರಯೋಧರ ಬಗ್ಗೆ ನಮ್ಮಲ್ಲಿ ಹಲವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ‘ಎಷ್ಟೋ ಜನ ಈ ಫೋಟೋಗಳನ್ನು ನೋಡಿ ಯಾರವರು ಎಂದು ಕೇಳಿದರು. ವೀರ ಯೋಧರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಅವರ ಫೋಟೋಗಳನ್ನೊಳಗೊಂಡ ಈ ಕೋಟ್ ರೂಪಿಸಿದ್ದೇನೆ’ ಎನ್ನುತ್ತಾರೆ ಲಕ್ಷ್ಮೀ.

  ನಟಿ ಕಾರುಣ್ಯ ರಾಮ್ ಈ ಕೋಟ್​ಗೆ ಮಾಡಲ್ ಆಗಿದ್ದು, ಅವರಿಗೆ ಈ ವಿಷಯದ ಬಗ್ಗೆ ಗಮನಸೆಳೆದಾಗ, ಅವರು ಸಂಶಯ ವ್ಯಕ್ತಪಡಿಸಿದರಂತೆ. ಆ ನಂತರ ಕೋಟ್ ನೋಡಿ, ಈ ಕೋಟ್​ಗೆ ಮಾಡಲ್ ಆಗುವುದಕ್ಕೆ ಒಪ್ಪಿಕೊಂಡಿದ್ದಾರೆಲ. ಇನ್ನು ಸಿನಿಮಾ ಛಾಯಾಗ್ರಾಹಕ ಪ್ರೀತಮ್ ತಗ್ಗಿನಮನೆ ಈ ಫೋಟೋಶೂಟ್ ಮಾಡಿದ್ದಾರೆ. ಅಂದಹಾಗೆ, ಈ ಕೋಟ್ ಮಾರಟಕ್ಕಿಲ್ಲ. ಸ್ವಾತಂತ್ರೊ್ಯೕತ್ಸವದ ಅಂಗವಾಗಿ, ವೀರಯೋಧರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಸೈನ್ ಮಾಡಲಾಗಿದೆ.

  ಬಿಎಸ್​ವೈ ಸಚಿವ ಸಂಪುಟ ವಿಸ್ತರಣೆ ಇನ್ನು ಶೀಘ್ರ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts