ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಅವಿರೋಧ ಆಯ್ಕೆ

ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷ, 20 ಕಾರ್ಯನಿರ್ವಾಹಕ ಸಮಿತಿಯ ಸಾಮಾನ್ಯ ಮತ್ತು 10 ಮಹಿಳಾ ಮೀಸಲಾತಿ ಸೇರಿ 31 ಸ್ಥಾನಗಳಿಗೆ ಸಲ್ಲಿಸಿದ್ದ ನಾಮಪತ್ರ ವಾಪಸು ಪಡೆಯಲು ಫೆ. 2 ಅಂತಿಮ ದಿನವಾಗಿತ್ತು. ಎಲ್ಲ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಪರಿಣಾಮ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಘೊಷಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗುರುರಾಜ ಹುಣಸಿಮರದ, ಕಾರ್ಯನಿರ್ವಾಹಕ ಸಮಿತಿಯ ಸಾಮಾನ್ಯ ಸ್ಥಾನಗಳಿಗೆ ಬಸವಂತಪ್ಪ ತೋಟದ, ಮಾಂತೇಶಗೌಡ ಪಾಟೀಲ, ಸಿದ್ದಪ್ಪ ಕಂಬಾರ, ರಾಜಶೇಖರ ಉಪ್ಪಿನ, ಶಂಕರ ಕುಂಬಿ, ಶ್ರೀಶೈಲ ಸುರೇಬಾನ, ಬಸವರಾಜ ಗೋಲಪ್ಪನವರ, ಶಿವಾನಂದ ಕವಳಿ, ಸಿದ್ದರಾಮ ನಡಕಟ್ಟಿ, ಶಿವಶರಣ ಕಲಬಶೆಟ್ಟರ, ಮಲ್ಲನಗೌಡ ಪಾಟೀಲ, ಮಲ್ಲಪ್ಪ ಭಾವಿ, ರವಿಕುಮಾರ ಬಡ್ನಿ, ಮನೋಜ ಸಂಗೊಳ್ಳಿ, ಬಸನಗೌಡ ಪಾಟೀಲ, ಗಂಗಪ್ಪ ಈರೇಶನವರ, ಶಶಿಧರ ಯಲಿಗಾರ, ಶರಣಪ್ಪಗೌಡ ಗುಜಮಾಗಡಿ, ಶೇಖರಪ್ಪ ಹೊಸೂರ, ಬಸವರಾಜ ಸೂರಗೊಂಡ, ಮಹಿಳಾ ಸ್ಥಾನಗಳಿಗೆ ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಕಾಂಚನಗಂಗಾ ಅಣ್ಣಿಗೇರಿ, ಪ್ರಭಾವತಿ ವಡ್ಡಿನ, ಸಂಧ್ಯಾ ಅಂಬಡಗಟ್ಟಿ, ಭಾರತಿ ಪಾಟೀಲ, ಶಿಲ್ಪಾಶ್ರೀ ವಡ್ಡಿನ್, ಪಾರ್ವತಿ ಹಾಲಭಾವಿ, ಮಹಾದೇವಿ ಯಾದವಾಡ, ಗೌರಿ ಹಿರೇಮಠ, ಮುಕ್ತಾ ಸವಡಿ ಆಯ್ಕೆಯಾದರು.

ನೂತನ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ ಸಮಾಜದ ಸಂಘಟನೆ, ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು. ಗ್ರಾ.ಪಂ. ಮಟ್ಟದಲ್ಲಿ ಘಟಕ ರಚಿಸಲಾಗುವುದು. ಬೆಂಗಳೂರು ಮಾದರಿಯಲ್ಲಿ ನಗರದಲ್ಲೂ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ನಿರ್ಮಾಣ ಇನ್ನಿತರ ಯೋಜನೆಗಳಿವೆ ಎಂದರು.