ವೀರರಾಣಿ ಚನ್ನಮ್ಮ ಪ್ರೌಢ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ರೋಣ: ಪಟ್ಟಣದ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ವಾಲಿಬಾಲ್, ಥ್ರೋ ಬಾಲ್, ಕಬಡ್ಡಿ, ಖೋಖೋ, ಚಕ್ರ ಎಸೆತ, ಗುಂಡು ಎಸೆತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರೋಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬಾಲಕಿಯರ ವಿಭಾಗ:
ವಾಲಿಬಾಲ್​ನಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ. ಥ್ರೋ ಬಾಲ್​ನಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ಶಾರದಾ ಬಾಲಕಿಯರ ಪ್ರೌಢ ಶಾಲೆ ದ್ವಿತೀಯ. ಕಬಡ್ಡಿಯಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ಶಾರದಾ ಬಾಲಕಿಯರ ಪ್ರೌಢ ಶಾಲೆ ದ್ವಿತೀಯ. ಖೋಖೋದಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ವಿ.ಎಫ್. ಪಾಟೀಲ ಪ್ರೌಢ ಶಾಲೆ ದ್ವಿತೀಯ. ಗುಂಡು ಎಸೆತದಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ನ್ಯೂ ಲಿಟಲ್ ಫ್ಲವರ್ ದ್ವಿತೀಯ. ಚಕ್ರ ಎಸೆತದಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ಸರ್ಕಾರಿ ಪ್ರೌಢ ಶಾಲೆ ದ್ವಿತೀಯ, ಭರ್ಚಿ ಎಸೆತದಲ್ಲಿ ವೀರರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ನ್ಯೂ ಲಿಟಲ್ ಫ್ಲವರ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ. ಉದ್ದ ಜಿಗಿತ, ವಿ.ಎಫ್. ಪಾಟೀಲ ಪ್ರೌಢ ಶಾಲೆ ಪ್ರಥಮ, ವೀರರಾಣಿ ಚನ್ನಮ್ಮ ದ್ವಿತೀಯ. ತ್ರಿವಿಧ ಜಿಗಿತದಲ್ಲಿ ಶಾರದಾ ಬಾಲಕಿಯರ ಪ್ರೌಢ ಶಾಲೆ ಪ್ರಥಮ, ನ್ಯೂ ಲಿಟಲ್ ಫ್ಲವರ್ ದ್ವಿತೀಯ.

ಬಾಲಕರ ವಿಭಾಗ:
ವಾಲಿಬಾಲ್​ನಲ್ಲಿ ಮಾತೋಶ್ರೀ ಬಸಮ್ಮ ಪಾಟೀಲ ಪ್ರೌಢ ಶಾಲೆ ಪ್ರಥಮ, ಗ್ರೀನ್ ವುಡ್ ದ್ವಿತೀಯ, ಥ್ರೋಬಾಲ್​ನಲ್ಲಿ ವಿ.ಎಫ್. ಪಾಟೀಲ ಪ್ರಥಮ, ನ್ಯೂ ಲಿಟಲ್ ಫ್ಲವರ್ ದ್ವಿತೀಯ, ಉದ್ದ ಜಿಗಿತದಲ್ಲಿ ಕೆ.ವಿ.ಎಸ್. ಪ್ರೌಢ ಶಾಲೆ ಪ್ರಥಮ, ನ್ಯೂ ಲಿಟಲ್ ಫ್ಲವರ್ ದ್ವೀತಿಯ, ತ್ರಿವಿಧ ಜಿಗಿತದಲ್ಲಿ ಕೆ.ವಿ.ಎಸ್. ಪ್ರಥಮ, ದ್ವಿತೀಯ, ಎತ್ತರ ಜಿಗಿತದಲ್ಲಿ ಕೆ.ವಿ.ಎಸ್. ಪ್ರಥಮ, ನ್ಯೂ ಲಿಟಲ್ ಫ್ಲವರ್ ದ್ವಿತೀಯ, ಚಕ್ರ ಎಸೆತದಲ್ಲಿ ವಿ.ಎಫ್. ಪಾಟೀಲ ಪ್ರಥಮ, ನ್ಯಾ ಲಿಟಲ್ ಫ್ಲವರ್ ದ್ವಿತೀಯ, ಹ್ಯಾಮರ್ ಥ್ರೋದಲ್ಲಿ ಶರಣ ಬಸವೇಶ್ವರ ಪ್ರಥಮ, ಮಾತೋಶ್ರೀ ಬಸಮ್ಮ ಪಾಟೀಲ ದ್ವಿತೀಯ, ಗುಂಡು ಎಸೆತದಲ್ಲಿ ವಿ.ಎಫ್. ಪಾಟೀಲ ಪ್ರಥಮ, ಗ್ರೀನ್​ವುಡ್ ದ್ವಿತೀಯ, ಭರ್ಚಿ ಎಸೆತದಲ್ಲಿ ಗ್ರೀನ್ ವುಡ್ ಪ್ರಥಮ, ಶರಣ ಬಸವೇಶ್ವರ ದ್ವಿತೀಯ ಸ್ಥಾನ.

Leave a Reply

Your email address will not be published. Required fields are marked *