ಸಿಂಧನೂರು: ಶರಣ ವೀರಭದ್ರಪ್ಪ ಮನೆ, ವ್ಯವಹಾರ ಬಿಟ್ಟು ಬಸವಾದಿ ಶರಣರ ವಿಚಾರಧಾರೆಗಳನ್ನು ಹೊತ್ತು ರಾಜ್ಯಾದ್ಯಂತ ಪ್ರಚಾರ ಮಾಡಿದರು ಎಂದು ಅನುಭಾವಿ ಅಶೋಕ ಬರಗುಂಡಿ ಹೇಳಿದರು.
ಕುರುಕುಂದಾ ಗ್ರಾಮದಲ್ಲಿ ಬಸವಕೇಂದ್ರದ ಜಿಲ್ಲಾಧ್ಯಕ್ಷರಾಗಿದ್ದ ಪಿ.ವೀರಭದ್ರಪ್ಪ ಕುರಕುಂದಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಗೃಹಸ್ಥಾಶ್ರಮದಲ್ಲಿದ್ದುಕೊಂಡು ವೀರಭದ್ರಪ್ಪ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ವೀರಭದ್ರಪ್ಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದರು.
ಗಂಗಮ್ಮ ವೀರಭದ್ರಪ್ಪ ಕುರುಕುಂದಿ, ಶೇಖರಪ್ಪ ಮೇಣೆಧಾಳ, ನಾಗಭೂಷಣ ನವಲಿ, ಸಿದ್ರಾಮಪ್ಪ ಮಾಡಶಿರವಾರ, ಗುಂಡಪ್ಪ ಬಳಿಗಾರ, ಕರೇಗೌಡ ಕುರಕುಂದಿ, ಶಾಂತಪ್ಪ ಚಿಂಚರಿಕಿ, ಶರಣಪ್ಪ ತೆಂಗಿನಕಾಯಿ, ಪಂಪಯ್ಯ ಸ್ವಾಮಿ ಸಾಲಿಮಠ, ಬಸಲಿಂಗಪ್ಪ ಬಾದರ್ಲಿ, ಎಚ್.ಜಿ.ಹಂಪಣ್ಣ ಇತರರಿದ್ದರು.