Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ವೀರಪ್ಪ ಮೊಯ್ಲಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಸುಳ್ಳುಗಾರ

Friday, 27.10.2017, 3:04 AM       No Comments

ರಾಷ್ಟ್ರಪತಿ ಭಾಷಣದಲ್ಲಿನ ಗೊಂದಲದ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಈ ಬಗ್ಗೆ ನನಗೆ ವಿಧಾನಸಭೆ ಅಧಿಕಾರಿಗಳೇ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಪಕ್ಷದಲ್ಲೂ ಗೊಂದಲವಿದೆ. ಅದನ್ನು ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದಲೇ ನನ್ನ ಸ್ಪರ್ಧೆ ಖಚಿತ ಎಂಬಿತ್ಯಾದಿ ಮಾಹಿತಿಯನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ದಿಗ್ವಿಜಯ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

 ವಿಜಯ್ ಜೊನ್ನಹಳ್ಳಿ ಬೆಂಗಳೂರು

# ವಜ್ರ ಮಹೋತ್ಸವ ಕಾರ್ಯಕ್ರಮ ನಡೆದ ರೀತಿ ಬಗ್ಗೆ ಅಭಿಪ್ರಾಯವೇನು?

ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮ ಜನರ ಸಂಭ್ರಮದ ಕಾರ್ಯಕ್ರಮ ಆಗಬೇಕಿತ್ತು. ಒಬ್ಬ ವ್ಯಕ್ತಿಯ ಕಾರ್ಯಕ್ರಮದ ರೀತಿಯಾಗಬಾರದು. ಪ್ರತಿಪಕ್ಷ ಸೇರಿ ನಾಯಕರ ಜೊತೆ ಚರ್ಚೆ ಮಾಡಿ ಕಾರ್ಯಕ್ರಮ ಮಾಡಬೇಕಿತ್ತು. ಒಟ್ಟಾರೆ ಈ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು. ಇದಕ್ಕೆ ಕಾರಣ ಸರ್ಕಾರ. ಈ ಕಾರ್ಯಕ್ರಮದಲ್ಲಿ ಜನರ ದುಡ್ಡಿನ ದುರುಪಯೋಗವಾಗಿದೆ.

# ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಷಣದ ಬಗ್ಗೆ ಗೊಂದಲವಿದೆಯಲ್ಲವೇ?

ರಾಷ್ಟ್ರಪತಿಗಳ ಭಾಷಣದ ಬಗ್ಗೆ ನನಗೆ ಖಚಿತ ಮಾಹಿತಿಯಿದೆ. 11 ಗಂಟೆಗೆ ನಿಗದಿಯಾಗಿದ್ದ ಭಾಷಣ 15 ನಿಮಿಷ ತಡವಾಗಿದ್ದು ಏಕೆ. ರಾಷ್ಟ್ರಪತಿಗಳಿಗೆ ಭಾಷಣ ಸಿದ್ಧವಾಗುತ್ತಿದೆ ಅದಕ್ಕೆ ತಡವಾಗುತ್ತಿದೆ ಎಂದು ನನಗೆ ವಿಧಾನಸಭಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಬೆಳಗ್ಗೆ ರಾಷ್ಚ›ಪತಿಗಳಿಗೆ ಭಾಷಣ ಹೋಗಿದೆ.

# ಹಾಗಿದ್ದರೆ ಸಿಎಂ ಸುಳ್ಳು ಹೇಳುತ್ತಿದ್ದಾರಾ?

ಖಂಡಿತಾ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ವೀರಪ್ಪಮೊಯ್ಲಿ ಕಾಂಗ್ರೆಸ್​ನ ದೊಡ್ಡ ಸುಳ್ಳುಗಾರ ಮುಖ್ಯಮಂತ್ರಿಯಾಗಿದ್ದರು. ಆದರೆ, ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯ್ಲಿಗಿಂತ ನೂರು ಪಟ್ಟು ಹೆಚ್ಚು ನಿಸ್ಸೀಮ.

# ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದರು. ನಂತರ ಸಮರ್ಥನೆ ಕೊಟ್ಟಿದ್ದರ ಬಗ್ಗೆ ನಿಮ್ಮ ಅನಿಸಿಕೆಯೇನು?

ಸಿದ್ದರಾಮಯ್ಯಗೆ ಜ್ಞಾನವಿಲ್ಲ. ನನಗೆ ಗೊತ್ತಿಲ್ಲದೆ ದೇವಸ್ಥಾನಕ್ಕೆ ಹೋಗಿದ್ದೆ ತಪ್ಪಾಯಿತು ಎಂದು ಹೇಳಿದ್ದರೆ ಸರಿಹೋಗುತ್ತಿತ್ತು. ಆದರೆ, ನಂತರವೂ ಸಮರ್ಥನೆ ಮಾಡಿಕೊಳ್ಳುತ್ತಾರೆ, ಭಂಡತನದಿಂದ ವರ್ತಿಸುತ್ತಾರೆ. ಹಂದಿ ಮಾಂಸ ತಿಂದು ಮಸೀದಿಗೆ ಹೋಗುತ್ತೇನೆ ಅಂತಾ ಹೇಳಲಿ? ಹಾಗೆ ಹೇಳುವುದಿಲ್ಲ.

# ಹಾಗಿದ್ದರೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲವೇ?

ಸಣ್ಣಪುಟ್ಟ ಗೊಂದಲವಿದ್ದು, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಸಂಪೂರ್ಣವಾಗಿ ಸಮಾಧಾನವಾಗಿದೆ ಅಂತಾ ಹೇಳಿ ನಾನು ಆತ್ಮ ವಂಚನೆ ಮಾಡಿಕೊಳ್ಳುವುದಿಲ್ಲ. ಸಂಘಟನೆ ವಿಚಾರವಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತಿದ್ದೇವೆ.

# ಈಶ್ವರಪ್ಪ ಪ್ರೆಷರ್ ಪಾಲಿಟಿಕ್ಸ್ ಮಾಡುತ್ತಾರೆ, ತಮಗೆ ಸ್ಥಾನಮಾನ ಸಿಕ್ಕಿಲ್ಲವೆಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿ ನಂತರ ಅದನ್ನು ಕೈಬಿಟ್ಟರು. ಈಶ್ವರಪ್ಪರನ್ನು ಹೇಗೆ ನಂಬುವುದು?

ನಾನು ಯಾವುದೇ ಪ್ರೆಷರ್ ಪಾಲಿಟಿಕ್ಸ್ ಮಾಡಿಲ್ಲ. ಇದ್ದದ್ದನ್ನು ನೇರವಾಗಿ ಹೇಳುವ ಜಾಯಮಾನ ನನ್ನದು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒಂದು ಚಳವಳಿಯಾಗಿ ನಡೆಯುತ್ತಿತ್ತು. ಆದರೆ, ಅದನ್ನು ನಿಲ್ಲಿಸಿದ್ದಕ್ಕೆ ನನಗೆ ನೋವಿದೆ. ವರಿಷ್ಠರ ಸೂಚನೆಯಂತೆ ನಿಲ್ಲಿಸಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಮನಸ್ಸಿನಿಂದ ಹೇಳುತ್ತೇನೆ, ಮುಂದೆ ಅಧಿಕಾರಕ್ಕೆ ಬರುತ್ತೇವೆ. ಆಗ ಚರ್ಚೆ ಮಾಡಿ ಮತ್ತೆ ರಾಯಣ್ಣ ಬ್ರಿಗೇಡ್ ಮುಂದುವರಿಸುವ ಬಗ್ಗೆ ತಿರ್ವನ ತೆಗೆದುಕೊಳ್ಳುತ್ತೇನೆ.

# ಮುಂದಿನ ವಿಧಾನಸಭೆ ಚುನಾವಣೆಗೆ ಈಶ್ವರಪ್ಪ ಸ್ಪರ್ಧಿಸುತ್ತಾರಾ?

ಖಂಡಿತ. ಶಿವಮೊಗ್ಗ ನಗರದಿಂದ ನಾನು ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ. ಯಾರೂ ಕೂಡ ನನ್ನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಇದಲ್ಲದೆ ನಾನು ಶಿವಮೊಗ್ಗ ನಗರದಿಂದ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ಕೇಂದ್ರ ಮಟ್ಟದ ನಾಯಕರು ನನಗೆ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಕಳೆದ ಬಾರಿ ಕೆಜೆಪಿ, ಬಿಜೆಪಿ ಸ್ಪರ್ಧೆಯಿಂದ ನಾನು ಸೋತಿದ್ದೆ. ಆದರೆ ಈ ಬಾರಿ ಒಗ್ಗಟ್ಟಾಗಿರುವುದರಿಂದ ಸೋಲುವ ಪ್ರಶ್ನೆಯಿಲ್ಲ.

 # ಕುರುಬ ಸಮುದಾಯದ ನಾಯಕರು ಯಾರು? ನೀವು ಕುರುಬರ ನಾಯಕರಾಗಲು ಸಿದ್ದರಾಮಯ್ಯ ವಿರುದ್ಧ ಹೊರಟಿದ್ದೀರಾ?

ಕುರುಬ ಸಮುದಾಯ ನಾಯಕ ನಾನಲ್ಲ, ಸಿದ್ದರಾಮಯ್ಯ. ನಾನು ಖಂಡಿತಾ ಕುರುಬ ಸಮುದಾಯ ನಾಯಕನೆಂದು ಹೇಳಿಕೊಳ್ಳಲ್ಲ. ಆದರೆ, ನಾನು ಹಿಂದು ಸಮಾಜದ ಅಭಿವೃದ್ದಿ ಮಾಡುವ ಕಾರ್ಯಕರ್ತ. ಆದರೆ, ಸಿದ್ದರಾಮಯ್ಯ ವರ್ತನೆಯಿಂದ ಶೇ.95 ಕುರುಬರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

 # ನೀವು ಮುಖ್ಯಮಂತ್ರಿಯಾಗಬೇಕು ಎನ್ನುವ ಕನಸಿಲ್ಲವೇ?

ನೋಡಿ ರಾಜಕೀಯಲ್ಲಿ ಯಾರೂ ಸನ್ಯಾಸಿಗಳಲ್ಲ. ಆದರೆ, ಈಗ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಘೋಷಿಸಿದೆ. ಆದ್ದರಿಂದ ಮುಖ್ಯಮಂತ್ರಿ ಬಗ್ಗೆ ಯಾರೇ ಯೋಚನೆ ಮಾಡಿದರೂ ಪಕ್ಷದ ದ್ರೋಹಿಯಾಗುತ್ತಾನೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಮುಂದೆ ಹೈಕಮಾಂಡ್ ತಿರ್ವನಕ್ಕೆ ನಾನು ಬದ್ಧವಾಗಿರುತ್ತೇನೆ.

Leave a Reply

Your email address will not be published. Required fields are marked *

Back To Top