ವಿ-ಸ್ಟಾರ್ ಉಡುಪುಗಳಿಗೆ ಶಿಖರ್​ಧವನ್ ರಾಯಭಾರಿ

ಬೆಂಗಳೂರು: ಪುರುಷರ ಒಳ ಉಡುಪುಗಳನ್ನು ಮಾರಾಟ ಮಾಡಲಿರುವ ವಿ-ಸ್ಟಾರ್ ಕಂಪನಿಯ ಬ್ರಾ್ಯಂಡ್ ಅಂಬಾಸಿಡರ್ ಆಗಿ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಆಯ್ಕೆಯಾಗಿದ್ದಾರೆ.

ವಿ-ಗಾರ್ಡ್ ಮತ್ತು ವಂಡರ್​ಲಾಗಳ ಪ್ರವರ್ತಕ ವಿ-ಸ್ಟಾರ್ ಕಂಪನಿಯು 3 ಸಾವಿರ ಕೋಟಿ ರೂ.ಗಳ ವಹಿವಾಟು ಹೊಂದಿದೆ. ಅತಿವೇಗದಲ್ಲಿ ಬೆಳೆಯುತ್ತಿರುವ ನಮ್ಮ ಕಂಪನಿಗೆ ಶಿಖರ್ ಧವನ್ ರಾಯಭಾರಿ ಆಗಿರುವುದು ಹೆಮ್ಮೆಯ ಸಂಗತಿ ಎಂದು ವಿ-ಸ್ಟಾರ್​ನ ಸಿಎಂಡಿ ಶೀಲಾ ಕೋಚೌಸೆಫ್ ಹೇಳಿದರು.

ಸ್ಪೋಟಕ ಬ್ಯಾಟಿಂಗ್ ಮೂಲಕ ಕೋಟ್ಯಂತರ ಸಂಖ್ಯೆಯ ಯುವಕರನ್ನು ಫಾಲೋವರ್ಸ್ ಆಗಿಸಿಕೊಂಡಿರುವ ಶಿಖರ್ ಧವನ್ ಯುವ ಸಮೂಹವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ವಿ-ಸ್ಟಾರ್ ಪ್ರತಿನಿಧಿ ಆಗಿದ್ದು, ಬ್ರಾ್ಯಂಡ್ ಕೂಡ ಯುವಕರ ಅಚ್ಚುಮೆಚ್ಚಿನದ್ದಾಗಲಿದೆ. ಹಲವು ಕಾರಣಗಳಿಂದ ಶಿಖರ್ ಧವನ್ ಆಯ್ಕೆ ಮಾಡಲಾಗಿದ್ದು, ಅವರು ವಿ-ಸ್ಟಾರ್​ನ ಸ್ಟೈಲ್​ನ್ನು ಪ್ರತಿನಿಧಿಸಲಿದ್ದಾರೆ. ಸ್ಟೈಲಿಷ್ ಒಳ ಉಡುಪಗಳನ್ನು ಒದಗಿಸುತ್ತಿರುವ ವಿ-ಸ್ಟಾರ್ ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ವಿ-ಸ್ಟಾರ್ ರಾಯಭಾರಿ ಆಗಿರುವುದರ ಕುರಿತು ಪ್ರತಿಕ್ರಿಯಿಸಿದ ಶಿಖರ್ ಧವನ್, ವಿ-ಸ್ಟಾರ್ ವಸ್ತ್ರ ಕ್ಷೇತ್ರದಲ್ಲಿ ಸಾಕಷ್ಟು ಅವಿಷ್ಕಾರಗಳನ್ನು ಮಾಡಿದೆ. ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖುಷಿ ಇದೆ ಎಂದು ಹೇಳಿದರು.

Leave a Reply

Your email address will not be published. Required fields are marked *