ಬಾಗಲಕೋಟೆ: ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ನಿಮಿತ್ಯ ಬಿವಿವಿ ಸಂಘದ ಸಜ್ಜಲಶ್ರೀ ನರ್ಶಿಂಗ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.
ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಎಲ್‌ಐಸಿ ಆಫೀಸ್ ಸರ್ಕಲ್ ವರೆಗೆ ಜಾಥಾ ನಡೆಯಯಿತು.ಪ್ರಾಚಾರ್ಯ ಡಾ.ದಿಲೀಪ್ ಎಸ್. ನಾಟೇಕರ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಅದನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನೀತಿಗಳನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕಮಕ್ಕಳ ಆರೋಗ್ಯ ಶುಶ್ರೂಷಾ ವಿಭಾಗದ ಪ್ರಾಧ್ಯಾಪಕ ಡಾ.ಪ್ರಶಾಂತ ಕುಲಕರ್ಣಿ, ಸಹ ಪ್ರಾಧ್ಯಾಪಕ ಸಂತೋಷ ಸಜ್ಜನ, ಉಪನ್ಯಾಸಕರಾದ ಶ್ರೀದೇವಿ ತೇಲಿ, ರೇಣುಕಾ ಜಾಲಿಹಾಳ, ರಾಜಶೇಖರ ಕಾಬನೂರ ಉಪಸ್ಥಿತರಿದ್ದರು.