Friday, 16th November 2018  

Vijayavani

Breaking News

ವಿಶೇಷ ವೇತನ ಎಲ್ಲ ಶಿಕ್ಷಕರಿಗೆ ವಿಸ್ತರಿಸಿ

Tuesday, 10.07.2018, 3:54 AM       No Comments

ರಾಮನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2008 ರ ನಂತರ ನೇಮಕ ಮತ್ತು ಬಡ್ತಿ ಹೊಂದಿದ ಶಿಕ್ಷಕರಿಗೆ ವಿಶೇಷ ವೇತನ ವಿಸ್ತರಿಸಬೇಕು. ರಾಜ್ಯದಲ್ಲಿ 6ನೇ ವೇತನ ಆಯೋಗದ ವರದಿ ಜಾರಿಯಾಗಿರುವುದರಿಂದ ಶಿಕ್ಷಕರಿಗೆ ಒಂದು ವೇತನ ಬಡ್ತಿ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಶಿಕ್ಷಕರ ಸೇವಾ ಅವಧಿಯಲ್ಲಿ ಆರ್ಥಿಕವಾಗಿ ಬಹುದೊಡ್ಡ ನಷ್ಟವಾಗುತ್ತಿದೆ. ಇದು ಶಿಕ್ಷಕ ಸಮುದಾಯದಲ್ಲಿ ಅಸಮಾನತೆ ಹುಟ್ಟುಹಾಕುತ್ತಿದೆ. ಆದ್ದರಿಂದ ಎಲ್ಲ ಶಿಕ್ಷಕರಿಗೂ ವಿಶೇಷ ವೇತನ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರೌಢ ಶಾಲೆ ಬಡ್ತಿ ಶಿಕ್ಷಕರಿಗೆ 10, 15, 20 ವರ್ಷಗಳ ಕಾಲ್ಪನಿಕ, ಸ್ವಯಂ ಚಾಲಿತ ವೇತನಗಳ ಗೊಂದಲವನ್ನು ನಿವಾರಿಸಬೇಕು. ಶಿಕ್ಷಕ ವಿದ್ಯಾರ್ಥಿಗಳ ಅನುಪಾತ ಪ್ರಸ್ತುತ 70:1 ಇದ್ದು, ಇದನ್ನು 40:1ಕ್ಕೆ ಪರಿವರ್ತಿಸಬೇಕು ಎಂದರು. ಎನ್​ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಸಿ.ವಿ. ಜಯಣ್ಣ, ಪ್ರಧಾನ ಕಾರ್ಯದರ್ಶಿ ಬಿ. ಚನ್ನೇಗೌಡ, ಉಪಾಧ್ಯಕ್ಷ ಎಚ್.ಪಿ. ಮಹಾಲಿಂಗಯ್ಯ, ಪದಾಧಿಕಾರಿಗಳಾದ ವೆಂಕಟೇಶ್, ಕೆ. ರಮೇಶ್, ಮಂಜುನಾಥ್, ಜಿ.ಕೆ. ರಂಗನಾಥ್, ಎಸ್. ಸುಮಂಗಳಾ ಹಾರೊಕೊಪ್ಪ ಇದ್ದರು.

 

Leave a Reply

Your email address will not be published. Required fields are marked *

Back To Top