Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ವಿಶೇಷ ಗುಣಗಳ ದಾಸವಾಳ

Friday, 13.07.2018, 3:03 AM       No Comments

ನಾವು ಭಾರತೀಯರು ಸಾಮಾನ್ಯವಾಗಿ ಹೂವುಗಳನ್ನು ಧಾರ್ವಿುಕ ಆಚರಣೆಗಳಿಗೆ ಬಳಸುತ್ತೇವೆ. ಆದರೆ ಎಷ್ಟೋ ಹೂಗಳು ಇದರ ಹೊರತಾಗಿ ಮನುಷ್ಯನ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧಗಳಾಗಿ ಕೆಲಸ ಮಾಡುತ್ತವೆ. ಅಂತಹ ಗುಂಪಿಗೆ ಸೇರಿರುವ ಒಂದು ಹೂವು ದಾಸವಾಳ. ತನ್ನ ಬಣ್ಣಗಳಿಂದ ಆಕರ್ಷಿಸುವ ಈ ಹೂವು ಆರೋಗ್ಯಕ್ಷೇತ್ರದಲ್ಲೂ ತನ್ನ ವಿಶೇಷ ಗುಣಗಳಿಂದ ಸ್ಥಾನ ಪಡೆದುಕೊಂಡಿದೆ.

ರಕ್ತಮೂಲವ್ಯಾಧಿಗಳಿಗೆ ಪ್ರತಿದಿನ 2-3 ದಾಸವಾಳದ ಹೂವುಗಳನ್ನು ಹಸಿಯಾಗಿಯೇ ಜಗಿದು ನುಂಗುತ್ತಿರಬೇಕು. ದಾಸವಾಳದ ಟೀ ಅಥವಾ ದಾಸವಾಳದ ರಸವೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ದಾಸವಾಳ ಹೂ ಮತ್ತು ಅದರ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲ ಹೊಳಪು ಹೆಚ್ಚುವುದು ಮತ್ತು ಆರೋಗ್ಯಯುತವಾದ ಕೇಶರಾಶಿಯನ್ನು ಪಡೆಯಬಹುದು. ನಿಶ್ಯಕ್ತಿ ಇರುವವರಿಗೂ ದಾಸವಾಳ ಹೂವು ಲಾಭದಾಯಕವಾಗಿದೆ. ಈ ದಾಸವಾಳದ ರಸವನ್ನು ಸೇವಿಸಿದರೆ ನಿಶ್ಯಕ್ತಿ ಪರಿಹಾರವಾಗುತ್ತದೆ.

ದಾಸವಾಳದ ರಸವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಜ್ವರವೂ ಗುಣವಾಗುತ್ತದೆ. ಮಿದುಳುದೌರ್ಬಲ್ಯ, ಮಾನಸಿಕ ವಿಕಾರಗಳಿಗೆ ದಾಸವಾಳದ ಹೂವನ್ನು ತೊಳೆದು ಹಸಿಯಾಗಿಯೇ ತಿನ್ನಬೇಕು. ಬಿಳಿದಾಸವಾಳ ಬಳಸುವುದರಿಂದ ಅನೇಕ ವಿವಿಧ ಮುಟ್ಟಿನ ಸಮಸ್ಯೆಗಳು ಪರಿಹಾರವಾಗುತ್ತವೆ.

ರಕ್ತಹೀನತೆ ಇರುವವರು ಒಂದು ಇಡೀ ದಾಸವಾಳದ ದಳಗಳು, ಎರಡು ಚಮಚ ಬೆಲ್ಲ, ಎರಡು ಚಮಚ ಎಳ್ಳು ಇವುಗಳನ್ನು ನೀರಿನೊಂದಿಗೆ ಸೇರಿಸಿ, ಜ್ಯೂಸ್ ಮಾಡಿ ಕುಡಿಯುವುದು.

Leave a Reply

Your email address will not be published. Required fields are marked *

Back To Top