Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ವಿವೇಕ್ ವಿಲನ್ ಅಲ್ಲ ಬಿಹಾರಿ ಪೊಲೀಸ್!

Friday, 10.08.2018, 3:01 AM       No Comments

ಬೆಂಗಳೂರು: ಸಾಹಸ ನಿರ್ದೇಶಕ ರವಿವರ್ವ ‘ರುಸ್ತುಂ’ ಸಿನಿಮಾ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅವರೊಂದಿಗೆ ಶೂಟಿಂಗ್​ನಲ್ಲೂ ಬಿಜಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕೂಡ ‘ರುಸ್ತುಂ’ ಬಳಗ ಸೇರಿಕೊಂಡಿದ್ದರು. ಆದರೆ, ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ? ಅವರ ಲುಕ್ ಎಂಥದ್ದು ಎಂಬುದರ ಬಗ್ಗೆ ಚಿತ್ರತಂಡ ಎಲ್ಲಿಯೂ ಸುಳಿವು ನೀಡಿರಲಿಲ್ಲ. ಮತ್ತೆ ಕೆಲವೆಡೆ ಶಿವಣ್ಣನ ಎದುರು ಖಳನ ಪಾತ್ರದಲ್ಲಿ ವಿವೇಕ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಶೂಟಿಂಗ್ ಸಂದರ್ಭದಲ್ಲಿ ಶಿವಣ್ಣ ಮತ್ತು ವಿವೇಕ್ ಜತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿವೇಕ್ ಪಾತ್ರದ ಕುರಿತು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ ರವಿವರ್ವ. ಶಿವಣ್ಣ ಅವರೊಂದಿಗೆ ಬಿಹಾರಿ ಪೊಲೀಸ್ ಅಧಿಕಾರಿಯಾಗಿ ವಿವೇಕ್ ಕಾಣಿಸಿಕೊಂಡಿದ್ದು, ಶೂಟಿಂಗ್ ಸಂದರ್ಭದ ಕೆಲವು ನೆನಪುಗಳನ್ನು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ‘ಟ್ಯಾಲೆಂಟೆಡ್ ತಂಡವನ್ನೇ ಕಟ್ಟಿಕೊಂಡು ನಿರ್ದೇಶಕ ರವಿವರ್ವ ‘ರುಸ್ತುಂ’ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ನಾನು ನಟಿಸುತ್ತಿದ್ದು, ಒಳ್ಳೆಯ ಪಾತ್ರವೇ ಸಿಕ್ಕಿದೆ. ಅದರಲ್ಲೂ ಚಿಕ್ಕಂದಿನಿಂದಲೂ ಶಿವಣ್ಣ ಅವರ ಸಿನಿಮಾ ನೋಡಿ ಬೆಳೆದಿದ್ದೇವೆ. ಅಂಥ ಲೆಜೆಂಡರಿ ಕಲಾವಿದನ ಜತೆಗೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top