ವಿವೇಕಾನಂದ ಯುವಕರಿಗೆ ಸ್ಫೂರ್ತಿ

ವಿಜಯವಾಣಿ ಸುದ್ದಿಜಾಲ ಶಹಾಬಾದ್
ವಿದ್ಯಾರ್ಥಿಗಳು, ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೆ ಸ್ವಾಭಿಮಾನ, ಪರೋಪಕಾರ, ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಚಿತ್ತಾಪುರ ಸಿಪಿಐ ಪಂಚಾಕ್ಷರಿ ಸಾಲಿಮಠ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 35ನೇ ವಾರ್ಷಿಕೋತ್ಸವ, ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅವರು ಪ್ರತಿ ಕಾಲಘಟ್ಟದಲ್ಲಿ ದೇಶದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮುಗುಳನಾಗಾವ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಭರತನೂರನ ಶ್ರೀ ಚಿಕ್ಕಗುರು ನಂಜೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಮಲ್ಲಕಂಬ ಪ್ರದರ್ಶಿಸುತ್ತಿರುವ ರಾವೂರ ಶಾಲೆಯ ವಿದ್ಯಾರ್ಥಿಗಳು

ಜಿಪಂ ಸದಸ್ಯ ಅರವಿಂದ ಚವ್ಹಾಣ, ಎಸಿಸಿ ಕಾರ್ಕಾನೆ ಎಚ್ಆರ್ಎ ಮುಖ್ಯಸ್ಥ ಪುಷ್ಕರ ಚೌಧರಿ, ವಿಕ್ರಮ ಸಿಂಗ್ ಇದ್ದರು. ಜಿಪಂ ಸದಸ್ಯ ಅಶೋಕ ಸಗರ ಅಧ್ಯಕ್ಷತೆ ವಹಿಸಿದ್ದರು. ಯಾದಗಿರಿ ಪಿಎಸ್ಐ ಉಸ್ಮಾನ್ ಪಟೇಲ್ ಅವರನ್ನು ಸತ್ಕರಿಸಲಾಯಿತು.

ವಿದ್ಯಾರ್ಥಿಗಳಿಂದ ಪರೇಡ್, ವಿಶಿಷ್ಠವಾದ ಮಲ್ಲಕಂಬ ಪ್ರದರ್ಶನ, ಸೂರ್ಯ ನಮಸ್ಕಾರ, ಒಂದೇ ಬೈಕ್ನಲ್ಲಿ 11 ವಿದ್ಯಾರ್ಥಿಗಳ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಕ್ಷಕ ಸಿದ್ದಲಿಂಗ ಬಾಳಿ ಸ್ವಾಮಿ ವಿವೇಕಾನಂದರ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಈಶ್ವರಗೌಡ ಪಾಟೀಲ, ರಾಜಶೇಖರ ಕಡಗನ್ ಪ್ರಾರ್ಥಿಸಿದರು, ಪ್ರಾಚಾರ್ಯ ಕೆ.ಐ.ಬಡಿಗೇರ್ ಸ್ವಾಗತಿಸಿದರು, ಸಿದ್ದಾರೂಢ ಬಿರಾದಾರ ವಾರ್ಷಿಕ ವರದಿ ವಾಚಿಸಿದರು, ಸುಗಣಾ ಕೊಳ್ಕೂರ ನಿರೂಪಣೆ ಮಾಡಿದರು. ಭುವನೇಶ್ವರಿ ವಂದಿಸಿದರು.

ಚನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಗುರುನಾಥ ಗುದ್ಗಲ್, ಸಿದ್ದಣ್ಣ ಕಲಶೆಟ್ಟಿ, ಅಣ್ಣರಾವ ಬಾಳಿ, ಚಂದ್ರು ಹಾವೇರಿ, ಶರಣು ಜ್ಯೋತಿ ಸೇರಿ ವಿದ್ಯಾರ್ಥಿಗಳ ಪಾಲಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *