ವಿವೇಕಾನಂದರ ಆದರ್ಶ ಅನುಸರಿಸಿ

ಶಿವಮೊಗ್ಗ: ಎಲ್ಲರೂ ವಿವೇಕಾನಂದರಾಗಲು ಸಾಧ್ಯವಿಲ್ಲ. ಕಡೇ ಪಕ್ಷ ಅವರ ವಿಚಾರ, ಆದರ್ಶಗಳನ್ನು ಅನುಸರಿಸುವ ಜತೆಗೆ ನಮ್ಮ ವಿವೇಕ ಬಳಸಿಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.

ಜಿಲ್ಲಾಡಳಿತ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ನೀಡಿದ ಸಂದೇಶಗಳನ್ನು ಅರಿತು ಅದನ್ನು ಪಾಲನೆ ಮಾಡಿದರೆ ನಮ್ಮಲ್ಲೂ ಒಂದಷ್ಟು ವಿವೇಕ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪಾಲಕರು ಹೇಳಿದ್ದನ್ನು ಕೇಳಿಸಿಕೊಳ್ಳುವ ಜಾಣ್ಮೆಯೂ ಇಲ್ಲ. ಸ್ವಂತ ಆಲೋಚನಾ ಶಕ್ತಿಯೂ ಇಲ್ಲ. ಈ ಸಂದರ್ಭದಲ್ಲಿ ವಿವೇಕಾನಂದರ ಆಶಯಗಳು ಹೆಚ್ಚು ಪ್ರಸ್ತುತತೆಯನ್ನು ಪಡೆದá-ಕೊಂಡಿವೆ ಎಂದರು.

ವಿವೇಕಾನಂದರು ಆದರ್ಶ ಪುರá-ಷರಾಗಿ, ಮಾರ್ಗದರ್ಶಕರಾಗಿ ಗá-ರá-ತಿಸಲ್ಪಟ್ಟಿದ್ದಾರೆ. ಕೇವಲ ತಮ್ಮ 30ನೇ ವಯಸ್ಸಿನಲ್ಲಿ ಭಾರತದ ಶ್ರೀಮಂತ ಸಂಸ್ಕೃತಿಯನ್ನು ವಿಶ್ವದ ಗಮನಕ್ಕೆ ತಂದ ಮೊದಲ ವ್ಯಕ್ತಿ ಇವರು. ಅಲ್ಲಿಯವರೆಗೆ ಭಾರತ ಅಂದರೆ ಶ್ರೀಮಂತ ರಾಷ್ಟ್ರ, ಅಲ್ಲಿ ಸಾಕಷ್ಟು ನೈರ್ಸಕ ಸಂಪತ್ತು ಹಾಗೂ ಆಭರಣ ಸಂಪತ್ತಿದೆ ಎಂಬ ಕಲ್ಪನೆ ಮಾತ್ರ ಇತ್ತು. ಇದೇ ಬ್ರಿಟಿಷರಿಗೆ ಆಕರ್ಷಣೆ ಉಂಟು ಮಾಡಿತ್ತು. ಆದರೆ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾರತ ಅಂದರೆ ಧಾರ್ವಿುಕತೆ-ಮಾನವೀಯತೆ-ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ ಎಂದು ಹೊರಜಗತ್ತಿಗೆ ತೋರಿಸಿಕೊಟ್ಟರು. ಅಂದಿನಿಂದ ಭಾರತವನ್ನು ಬೇರೆ ದೇಶಗಳು ನೋಡುವ ದೃಷ್ಟಿಕೋನ ಬದಲಾಯಿತು ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಭಾವನಾ ಮಾತನಾಡಿ, ಇಡೀ ಜಗತ್ತಿನ ಏಳಿಗೆ ಬಯಸಿದ್ದವರು ವಿವೇಕಾನಂದರು. ಏಳಿ ಎದ್ದೇಳಿ-ಜಗತ್ತಿನ ಒಳಿತಿಗೆ ಶ್ರಮ ವಹಿಸಿ ಎಂದು ಕರೆ ನೀಡಿದ್ದಾರೆ. ತಾಯಿ ಮತ್ತು ತಾಯಿ ನಾಡನ್ನು ಪ್ರೀತಿಸá-ವವರು ಜಗತ್ತನ್ನೇ ಪ್ರೀತಿಸಬಲ್ಲರು ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ಭಾರತ ವಿಶ್ವಗುರು ಆಗಿದೆ ಎಂದರು.

ಜಿಪಂ ಸಿಇಒ ಕೆ.ಶಿವರಾಮೇಗೌಡ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಕೆ.ಅನá-ರಾಧಾ, ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯು ಡಾ. ಪಾರ್ವತಮ್ಮ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಡಿಡಿಪಿಯು ಸುಮಾ ಉಪಸ್ಥಿತರಿದ್ದರು.