ಸಂಬರಗಿ: ಗಡಿಭಾಗದ ರೈತರ ನೀರಿನ ಸಮಸ್ಯೆ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ ರಾವಸಾಹೇಬ್ ಐಹೊಳೆ ತಿಳಿಸಿದರು.
ಗ್ರಾಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಪ್ರಮುಖ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಕೂಡಲೇ ಅನುಷ್ಠಾನಗೊಳಿಸಬೇಕು. ಈ ಭಾಗದ ಜನರು ಬೆಳಗಾವಿ ಜಿಲ್ಲಾಸ್ಪತ್ರೆಗೆ ತೆರಳಲು ಬಹಳಷ್ಟು ದೂರವಾಗುತ್ತದೆ. ಹೀಗಾಗಿ, ಚಿಕ್ಕೋಡಿ ಹಾಗೂ ಅಥಣಿ ಎರಡು ಪ್ರತ್ಯೇಕ ಜಿಲ್ಲೆ ಘೋಷಿಸಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂ ಪ್ರಕಾಶ್ ಪಾಟೀಲ, ಅಣ್ಣಾಸಾಹೇಬ ಮಿಸಳ, ಧೋಂಡಿರಾಮ್ ಸುತಾರ, ಅಶೋಕ, ಬಾಬು ಮಾನೆ, ಮಲ್ಲಿಕಾರ್ಜುನ ದಳವಾಯಿ ಇತರರಿದ್ದರು.