ಚಿತ್ರದುರ್ಗ: ಕೃಷಿ,ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು,ಡಿಸಿ ಅಧ್ಯಕ್ಷತೆ ಕರೆದಿದ್ದ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು 2 ಮುಂ ದೂಡಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಜಿಲ್ಲಾಧಿ ಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.
ಸಮಸ್ಯೆಗಳ ಕುರಿತ ಚರ್ಚಿಸಲು ಕೃಷಿ,ಭೂ ದಾಖಲೆ,ಕಂದಾಯ ಇತ್ಯಾದಿ ನಾನಾ ಇಲಾಖೆಗಳ ಅಧಿಕಾರಗಳ ಸಭೆಯನ್ನು ಮುಂದೂಡಿರುವ ಜಿ ಲ್ಲಾಡಳಿತ ಕ್ರಮ ಖಂಡಿಸಿದರು.ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕು. ಅಕ್ರಮ-ಸಕ್ರಮದಡಿ ಕೃಷಿ ಪಂಪ್ ಸೆಟ್‌ಗಳಿಗೆ ಮೂಲ ಸೌಕರ‌್ಯಗಳನ್ನು ಒದಗಿಸುವುದರ ಜತೆಗೆ ಸ್ವಯಂ ವೆಚ್ಚದೊಂದಿಗೆ ಶೀಘ್ರ ಸಂಪರ್ಕ ಸ್ಕೀಂನಿಂದ ರೈತರಿಗೆ ಆಗುತ್ತಿರುವ ತೊಂದರೆ,ಹಗಲು ಹೊತ್ತು 8 ಗಂಟೆ ಗುಣಮಟ್ಟದ ವಿದ್ಯುತ್‌ಪೂರೈಸ ಬೇಕು.
ವಿನಾ ಕಾರಣ ರೈತರು ಕಚೇರಿಗಳಿಗೆ ಅಲೆದಾಡಿಸುವ ಕಂದಾಯ,ಸರ್ವೆ ಮತ್ತಿತರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ಸಾಲ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಸರ್ಕಾರಿ ಶಾಲೆಗಳಲ್ಲಿ ಎಸ್ ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್,ಬೇಡರಹಳ್ಳಿ ಬಸವರೆಡ್ಡಿ,ಕಬ್ಬಿಗೆರೆ ನಾಗರಾಜ್,ಹಿರಿಯೂರು ತಿಮ್ಮಯ್ಯ,ಅಜಯ್,ರಾಮರೆಡ್ಡಿ,ಕೋ ಗುಂಡೆ ರವಿ,ಪ್ರವೀಣ್,ಸಿದ್ರಾಮಣ್ಣ,ಶಿವಕುಮಾರ್,ಮಲ್ಲಿಕಾರ್ಜುನ,ಚಂದ್ರಣ್ಣ,ಕಾಟಪ್ಪ,ಜಯಣ್ಣ,ಹನುಮಂತಪ್ಪ,ತಿಪ್ಪೇಸ್ವಾಮಿ,ರವಿಕುಮಾರ್, ಗಂಗಣ್ಣ,ಉಮಾವತಿ,ಅರುಣಾ,ಪದ್ಮಾವತಿ ಮತ್ತಿತರರು ಇದ್ದರು.
